ಬಾರ್ಬಡೋಸ್: ಟಿ20 ವಿಶ್ವಕಪ್ ಫೈನಲ್ ನಲ್ಲಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಅಂಪಾಯರ್ ಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
ಆದರೆ ಅಂಪಾಯರ್ ಗಳ ಲಿಸ್ಟ್ ನೋಡಿ ಭಾರತ ಕ್ರಿಕೆಟ್ ಪ್ರೇಮಿಗಳು ಆತಂಕ್ಕೀಡಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಪಂದ್ಯದಲ್ಲಿ ಅಂಪಾಯರ್ ಗಳಾಗಿ ಭಾರತಕ್ಕೆ ದುರಾದೃಷ್ಟರಾದ ರಿಚರ್ಡ್ ಕೆಟಲ್ ಬರೊ ಇರುವುದೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈ ಅಂಪಾಯರ್ ಇದ್ದರೆ ಭಾರತ ಸೋಲುತ್ತದೆ ಎಂಬುದು ಅಭಿಮಾನಿಗಳ ನಂಬಿಕೆ.
ಈ ಹಿಂದೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯ, ಡಬ್ಲ್ಯುಟಿಸಿ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲೂ ಇವರೇ ಅಂಪಾಯರ್ ಆಗಿದ್ದರು. ಆಗೆಲ್ಲವೂ ಭಾರತ ಸೋಲು ಅನುಭವಿಸಿತ್ತು. ರಿಚರ್ಡ್ ಕೆಟಲ್ ಬರೊ ಅಂಪಾಯರ್ ಆಗಿದ್ದಾಗ ಭಾರತ 6 ನಾಕೌಟ್ ಪಂದ್ಯಗಳನ್ನು ಸೋತಿದೆ.
ಸಮಾಧಾನಕರ ಅಂಶವೆಂದರೆ ಇಂದು ಕೆಟಲ್ ಬರೊ ಫೀಲ್ಡ್ ಅಂಪಾಯರ್ ಆಗಿರುವುದಿಲ್ಲ. ಬದಲಾಗಿ ಥರ್ಡ್ ಅಂಪಾಯರ್ ಆಗಿರುತ್ತಾರೆ. ಫೀಲ್ಡ್ ಅಂಪಾಯರ್ ಗಳಾಗಿ ನ್ಯೂಜಿಲೆಂಡ್ ನ ಕ್ರಿಸ್ ಗಫ್ನಿ ಮತ್ತು ಇಂಗ್ಲೆಂಡ್ ನ ರಿಚರ್ಡ್ ಇಲ್ಲಿಂಗ್ ವರ್ತ್ ಕಾರ್ಯನಿರ್ವಹಿಸಲಿದ್ದಾರೆ.