T20 WC 2024: ಗೆದ್ದರೂ ಅಳುತ್ತಿದ್ದ ರೋಹಿತ್ ಶರ್ಮಾ: ವಿರಾಟ್ ಕೊಹ್ಲಿ ಹೈ ಫೈ ಕೊಡಲೇ ಇಲ್ಲ

Krishnaveni K

ಶುಕ್ರವಾರ, 28 ಜೂನ್ 2024 (08:10 IST)
Photo Credit: X
ಗಯಾನ: ಟಿ20 ವಿಶ್ವಕಪ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಗೆದ್ದ ಟೀಂ ಇಂಡಿಯಾ ಆಟಗಾರರು ಖುಷಿಯಲ್ಲಿದ್ದರೆ ಇತ್ತ ರೋಹಿತ್ ಶರ್ಮಾ ಸಂತೋಷದ ಕಣ್ಣೀರು ಹರಿಸುತ್ತಿದ್ದರು.

ಸೆಮಿಫೈನಲ್ ನಲ್ಲಿ ಗೆದ್ದು ಫೈನಲ್ ಗೇರಿದ ಬಳಿಕ ಟೀಂ ಇಂಡಿಯಾ ಆಟಗಾರರು ಸಂಭ್ರಮಕ್ಕಿಂತ ಒಂದು ರೀತಿಯಲ್ಲಿ ಭಾವುಕರಾದರು. ಇದಕ್ಕೆ ಹಲವು ಕಾರಣಗಳಿರಬಹುದು. ಕಳೆದ ಬಾರಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಸೋತಿದ್ದು, ಕಳೆದ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದು ಎಲ್ಲವೂ ನೆನಪಾಗಿರಬಹುದು.

ಟೀಂ ಇಂಡಿಯಾ ಗೆಲುವಿನ ಬಳಿಕ ಪೆವಿಲಿಯನ್ ಗೆ ಸಾಗುವ ಹಾದಿಯಲ್ಲಿ ಕುರ್ಚಿಯಲ್ಲಿ ಏಕಾಂಗಿಯಾಗಿ ಕುಳಿತು ಸಂತೋಷದಿಂದ ನಾಯಕ ರೋಹಿತ್ ಶರ್ಮಾ ಕಣ್ಣೀರಿಡುತ್ತಿದ್ದರು. ಈ ವೇಳೆ ಅವರ ಬಳಿ ಬಂದ ವಿರಾಟ್ ಕೊಹ್ಲಿ ಹೈ ಫೈ ನೀಡಲು ಮುಂದಾದರು. ಆದರೆ ವಿರಾಟ್ ರನ್ನು ನೋಡಿ ಭಾವುಕರಾಗಿ ಕಣ್ಣೀರು ಹಾಕಿದ ರೋಹಿತ್ ಹೈ ಫೈ ನೀಡಲೂ ತಯಾರಿರಲಿಲ್ಲ.

ಕೊನೆಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ವಿರಾಟ್ ತಾವೂ ಭಾವುಕರಾಗಿ ರೋಹಿತ್ ಬೆನ್ನುತಟ್ಟಿ ಮುಂದೆ ನಡೆದರು. ಡ್ರೆಸ್ಸಿಂಗ್ ರೂಂನ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೂ ಈ ಸನ್ನಿವೇಶ ನೋಡಿ ಭಾವುಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ