ಇದು ಯಾವ ಸೀಮೆ ಪಿಚ್ ಕಣ್ರೀ… ಟೀಂ ಇಂಡಿಯಾ ಇಂಥಾ ಪಿಚ್ ನಲ್ಲಿ ಆಡೋದಾ

Krishnaveni K

ಗುರುವಾರ, 6 ಜೂನ್ 2024 (11:42 IST)
ನ್ಯೂಯಾರ್ಕ್: ಭಾರತ ಮತ್ತು ಐರ್ಲೆಂಡ್ ನಡುವೆ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ಅಭಿಮಾನಿಗಳು ಪಿಚ್ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಯಾವ ಸೀಮೆ ಪಿಚ್, ಇಂಥಾ ಪಿಚ್ ನಲ್ಲಿ ವಿಶ್ವಕಪ್ ಆಡಿಸುವುದು ಸರಿಯಲ್ಲ ಎಂದಿದ್ದಾರೆ.
 
ನ್ಯೂಯಾರ್ಕ್ ನ ಮೈದಾನದ ಔಟ್ ಫೀಲ್ಡ್ ಬಗ್ಗೆ ಈಗಾಗಲೇ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಟೀಕಿಸಿದ್ದರು. ಇಂತಹ ಮೈದಾನದಲ್ಲಿ ಆಡುವಾಗ ಎಲ್ಲಿ ನಮ್ಮ ಆಟಗಾರರಿಗೆ ಗಾಯವಾಗುತ್ತದೋ ಎಂದು ಆತಂಕವಾಗುತ್ತದೆ ಎಂದಿದ್ದರು.
 
ನಿನ್ನೆಯ ಭಾರತ ವರ್ಸಸ್ ಐರ್ಲೆಂಡ್ ಪಂದ್ಯದಲ್ಲೂ ವಿಕೆಟ್ ಗಳ ಸುರಿಮಳೆಯಾಗಿತ್ತು. ಐರ್ಲೆಂಡ್ ವಿಕೆಟ್ ಗಳು ರನ್ ಗಿಂತ ವೇಗವಾಗಿ ಉರುಳುತ್ತಿದ್ದವು. ಇಂಥಾ ಪಿಚ್ ಜೊತೆಗೆ ನಿಧಾನಗತಿಯ ಔಟ್ ಫೀಲ್ಡ್ ಪ್ರೇಕ್ಷಕರನ್ನು ಅಸಹನೆಗೆ ದೂಡಿತ್ತು.
 
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದ ಅಭಿಮಾನಿಗಳು ಟಿ20 ವಿಶ್ವಕಪ್ ನಂತಹ ಪ್ರತಿಷ್ಠಿತ ಟೂರ್ನಿ ಆಡಲು ಲಾಯಕ್ಕಾದ ಮೈದಾನವಾಗಲೀ ಪಿಚ್ ಆಗಲೀ ಇದಲ್ಲ. ಕ್ಲಬ್ ಲೆವೆಲ್ ಕ್ರಿಕೆಟ್ ಆಡಬಹುದಾದಂತಹ ಪಿಚ್ ಆಗಿದೆ. ಇಂತಹ ಮೈದಾನಗಳಲ್ಲಿ ಐಸಿಸಿ ಟೂರ್ನಿಗಳನ್ನು ಯಾಕೆ ಆಯೋಜಿಸುತ್ತಾರೆ ಎಂದು ಟೀಕೆ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ