TATA IPL 2025: ನಾಳೆ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಮುಖಾಮುಖಿ

Sampriya

ಭಾನುವಾರ, 6 ಏಪ್ರಿಲ್ 2025 (16:17 IST)
Photo Courtesy X
ಮುಂಬೈ: 2025 ರ ಐಪಿಎಲ್‌ನಲ್ಲಿ ಐದನೇ ಪಂದ್ಯಕ್ಕೆ ಸಜ್ಜಾಗುತ್ತಿರುವಾಗ ಮುಂಬೈ ಇಂಡಿಯನ್ಸ್‌ ನಾಳೆ  ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಸತತ ಸೋಲಿನಿಂದ ಟೇಬಲ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್‌ ಇದೀಗ ಆರ್‌ಸಿಬಿ ಎದುರು ಗೆಲುವಿನ ಲೆಕ್ಕಚಾರದಲ್ಲಿ ತವರಿನಲ್ಲಿ ಕಣಕ್ಕಿಳಿಯಲಿದೆ. ಆರ್‌ಸಿಬಿ ಆಡಿದ ಮೂರು ಪಂದ್ಯಾಟದಲ್ಲಿ ಎರಡರಲ್ಲಿ ಗೆದ್ದು ಟೇಬಲ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮತ್ತೇ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ. ಒಟ್ಟಾರೆ ನಾಳೆ ಎರಡು ಬಲಿಷ್ಠ ತಂಡಗಳ ನಡುವೆ ಐಪಿಎಲ್‌ 2025ರ ಪಂದ್ಯಾಟ ನಡೆಯಲಿದೆ.

ಈ ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ರಯಾನ್ ರಿಕಲ್ಟನ್ ಮಾತ್ರ ಅರ್ಧಶತಕಗಳನ್ನು ಗಳಿಸಿರುವುದರಿಂದ, ಮುಂಬೈ ಎಲ್ಲಾ ತಂಡಗಳಲ್ಲಿ ಕಡಿಮೆ ಅರ್ಧಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದೆ.

ಮೊಣಕಾಲಿನ ಗಾಯದಿಂದಾಗಿ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಮಾಜಿ ನಾಯಕ ರೋಹಿತ್ ಶರ್ಮಾ, ಈ ಪಂದ್ಯಕ್ಕೆ ಅನುಮಾನಾಸ್ಪದವಾಗಿಯೇ ಇದ್ದಾರೆ. ಅವರ ಮರಳುವಿಕೆ ನಿರ್ಣಾಯಕವಾಗಬಹುದು, ವಿಶೇಷವಾಗಿ ಮುಂಬೈ ತಂಡವು ಅಗ್ರಸ್ಥಾನದಲ್ಲಿ ಸ್ಥಿರತೆಯ ತೀವ್ರ ಅಗತ್ಯವನ್ನು ಎದುರಿಸುತ್ತಿದೆ. ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮತ್ತೆ ಸೇರುತ್ತಾರಾ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ