TATA IPL 2025: ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು, ಗುಜರಾತ್‌ಗೆ 8 ವಿಕೆಟ್‌ಗಳ ಜಯ

Sampriya

ಬುಧವಾರ, 2 ಏಪ್ರಿಲ್ 2025 (23:13 IST)
Photo Courtesy X
ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವಿರುದ್ಧದ ಪಂದ್ಯಾಟದಲ್ಲಿ ಆರ್‌ಸಿಬಿ ಹೀನಾಯ ಸೋಲು ಅನುಭವಿಸಿದೆ.  ಈ ಮೂಲಕ ತವರಿನಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ  ಭಾರೀ ನಿರಾಸೆಯಾಗಿದೆ. ಅಮೋಘ ಬೌಲಿಂಗ್ ಮೂಲಕ ಆರ್‌ಸಿಬಿಯನ್ನು ಕಟ್ಟಿಹಾಕಿದ ಗುಜರಾತ್ ಟೈಟನ್ಸ್‌, 8 ವಿಕೆಟ್‌ನಿಂದ ಭರ್ಜರಿ ಜಯ ಸಾಧಿಸಿದೆ.

ಈ ಮೂಲಕ ಗುಜರಾತ್ ಟೇಬಲ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು,ಮೂರನೇ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಇದೀಗ ಟೇಬಲ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ.

ಟಾಸ್ ಗೆದ್ದ ಗುಜರಾತ್ ಟೇಟನ್ಸ್‌ ಬೌಲಿಂಗ್ ಆಯ್ದು, ಆರ್‌ಸಿಬಿಗೆ ಬ್ಯಾಟಿಂಗ್‌ ನೀಡಿತು. ಆದರೆ ಮೊಹಮ್ಮದ್ ಸಿರಾಜ್, ಸಾಯಿ ಕಿಶೋರ್ ಅವರು ಅದ್ಭುತ ಬೌಲಿಂಗ್‌ಗೆ ಆರ್‌ಸಿಬಿ ಆರಂಭದಲ್ಲೇ ಸಾಲ್ಟ್‌, ವಿರಾಟ್‌, ಪಡಿಕ್ಕರ್, ಪಾಟಿದಾರ್ ಅವರು ಔಟ್ ಆದರೂ. ಆದರೆ 20 ಓವರ್‌ಗಳಲ್ಲಿ ಆರ್‌ಸಿಬಿ 8 ವಿಕೆಟ್‌ ಕಳೆದುಕೊಂಡು 169 ರನ್ ಗಳಿಸಿತು. 170 ರನ್‌ಗಳ ಟಾರ್ಗೆಟ್‌ನ್ನು ಬೆನ್ನಟ್ಟಿದ ಗುಜರಾತ್ ಇನ್ನೂ 13 ಎಸೆತಗಳು ಬಾಕಿಯಿರುವಾಗ 8ವಿಕೆಟ್‌ನ ಅಮೋಘ ಜಯ ಸಾಧಿಸಿತು.

ಇಂದು ತವರಿನಲ್ಲಿ ಆರ್‌ಸಿಬಿ ಮೊದಲ ಪಂದ್ಯವನ್ನು ಎದುರಿಸಿತು. ಆರ್‌ಸಿಬಿ ಪಡೆಯನ್ನು ಹುರಿದುಂಬಿಸಲು ಸಾಕಷ್ಟು ಅಭಿಮಾನಿಗಳು ಸೇರಿದ್ದು,



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ