TATA WPL 2025: ಆರ್ ಸಿಬಿ ಹುಡುಗರ ಟೀಂಗೆ ಎಬಿಡಿ ಬದಲು ರಿಚಾ ಘೋಷ್ ರನ್ನು ಹಾಕ್ರೋ

Krishnaveni K

ಮಂಗಳವಾರ, 18 ಫೆಬ್ರವರಿ 2025 (20:49 IST)
Photo Credit: X
ಬೆಂಗಳೂರು: ಡಬ್ಲ್ಯುಪಿಎಲ್ ನಲ್ಲಿ ಫಿನಿಶರ್ ಆಗಿ ಆರ್ ಸಿಬಿ ಪರ ಮಿಂಚುತ್ತಿರುವ ರಿಚಾ ಘೋಷ್ ರನ್ನು ಹುಡುಗರ ಟೀಂನಲ್ಲಿ ಆಡಿಸಿ ಎಂದು ಕೆಲವು ಅಭಿಮಾನಿಗಳು ತಮಾಷೆ ಮಾಡಿದ್ದಾರೆ.

ಆರ್ ಸಿಬಿ ಹುಡುಗರ ಟೀಂಗೆ ಹೋಲಿಸಿದರೆ ಹುಡುಗಿಯರ ಟೀಂ ಭರ್ಜರಿ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಕಳೆದ ಸೀಸನ್ ಲ್ಲಿ ಚಾಂಪಿಯನ್ ಆಗಿದ್ದ ಆರ್ ಸಿಬಿ ಈ ಸೀಸನ್ ಲ್ಲಿ ಈಗಾಗಲೇ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಮೂಲಕ ಹಾಲಿ ಚಾಂಪಿಯನ್ ಪಟ್ಟಕ್ಕೆ ತಕ್ಕುದಾದ ಆಟವಾಡುತ್ತಿದೆ.

ಮೊದಲ ಪಂದ್ಯವನ್ನು ಗೆದ್ದಿದ್ದೇ ರಿಚಾ ಘೋಷ್ ಸಾಹಸದಿಂದ. ಎರಡನೇ ಪಂದ್ಯದಲ್ಲೂ ಕೊನೆಯಲ್ಲಿ ಬಂದರೂ ಭರ್ಜರಿ ಸಿಕ್ಸರ್ ಮೂಲಕ ತಂಡಕ್ಕೆ ಗೆಲುವಿನ ರನ್ ಗಳಿಸಿಕೊಟ್ಟಿದ್ದರು.

ಅವರ ಬೀಡುಬೀಸಾದ ಬ್ಯಾಟಿಂಗ್ ಅಭಿಮಾನಿಗಳ ಮನಸೆಳೆಯುತ್ತಿದೆ. ಎಷ್ಟರಮಟ್ಟಿಗೆ ಎಂದರೆ ನೆಟ್ಟಿಗರೊಬ್ಬರು ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹೇಗಿದ್ದರೂ ಪುರುಷರ ತಂಡದಲ್ಲಿ ಫಿನಿಶರ್ ಎಬಿಡಿ ವಿಲಿಯರ್ಸ್ ಇಲ್ಲ, ಅವರ ಬದಲಿಗೆ ರಿಚಾ ಘೋಷ್ ರನ್ನು ಹಾಕ್ರೋ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ