ವಡೋದರಾ: ಡಬ್ಲ್ಯುಪಿಎಲ್ ನಲ್ಲಿ ಮೊದಲ ಪಂದ್ಯ ಗೆದ್ದ ಆರ್ ಸಿಬಿಗೆ ಇಂದು ಎರಡನೇ ಪಂದ್ಯದಲ್ಲಿ ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎದುರಾಳಿಯಾಗಿದೆ. ಆದರೆ ಆರ್ ಸಿಬಿ ಫ್ಯಾನ್ಸ್ ಈ ಬಾರಿ ಲೋಕಲ್ ಪ್ರತಿಭೆ, ಕರ್ನಾಟಕ ಕ್ರಶ್ ಶ್ರೇಯಾಂಕ ಪಾಟೀಲ್ ರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಗಾಯದಿಂದಾಗಿ ಈ ಬಾರಿ ಶ್ರೇಯಾಂಕ ಪಾಟೀಲ್ ಡಬ್ಲ್ಯುಪಿಎಲ್ ಪಂದ್ಯಾವಳಿಯ ಭಾಗವಾಗಿಲ್ಲ. ಅವರು ಬೇಗನೇ ಚೇತರಿಸಿಕೊಂಡು ತಂಡವನ್ನು ಕೂಡಿಕೊಳ್ಳಲಿ ಎಂದು ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ. ಯಾಕೆಂದರೆ ಶ್ರೇಯಾಂಕಗೆ ಆರ್ ಸಿಬಿಯಲ್ಲೇ ಅವರದ್ದೇ ಅಭಿಮಾನಿ ವರ್ಗದವರಿದ್ದಾರೆ.
ಇಂದಿನ ಪಂದ್ಯದ ವಿಚಾರಕ್ಕೆ ಬಂದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಇದುವರೆಗೆ ಹೆಚ್ಚಿನ ಯಶಸ್ಸು ಪಡೆದಿಲ್ಲ ಇದುವರೆಗೆ ಆರ್ ಸಿಬಿ ಮತ್ತು ಡೆಲ್ಲಿ 5 ಪಂದ್ಯಗಳನ್ನು ಆಡಿವೆ. ಈ ಪೈಕಿ ಆರ್ ಸಿಬಿ ಗೆದ್ದಿದ್ದು ಕೇವಲ ಒಂದು ಬಾರಿ ಮಾತ್ರ. ಹೀಗಾಗಿ ಡೆಲ್ಲಿ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ.
ಆದರೆ ಆರ್ ಸಿಬಿ ಈಗ ಮೊದಲಿನಂತಲ್ಲ. ರಿಚಾ ಘೋಷ್ ಪಂದ್ಯ ಫಿನಿಶ್ ಮಾಡುವಷ್ಟು ಪಳಗಿದ್ದಾರೆ. ಆದರೆ ಆರಂಭಿಕರಾಗಿ ಸೋಫಿ ಡಿವೈನ್ ರನ್ನು ತಂಡ ಮಿಸ್ ಮಾಡಿಕೊಳ್ಳುತ್ತಿದೆ. ಆದರೆ ಎಲ್ಲಿಸ್ ಪೆರಿ ಮತ್ತು ಸ್ಮೃತಿ ಮಂದನಾ ಮೇಲೆ ತಂಡ ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದೆ. ಬೌಲಿಂಗ್ ನಲ್ಲೂ ರೇಣುಕಾ ಸಿಂಗ್ ಉತ್ತಮ ಓಪನಿಂಗ್ ಕೊಡುತ್ತಿದ್ದಾರೆ. ಡೆಲ್ಲಿಯಂತಹ ತಂಡವನ್ನು ಮಣಿಸಬೇಕಾದರೆ ಉಳಿದ ಬೌಲರ್ ಗಳಿಂದ ಅವರಿಗೆ ಸಾಥ್ ಸಿಗಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.