ಟೀಂ ಇಂಡಿಯಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಸ್ಥಳಾಂತರಕ್ಕೆ ಆಸ್ಟ್ರೇಲಿಯಾ ಚಿಂತನೆ

ಶುಕ್ರವಾರ, 7 ಆಗಸ್ಟ್ 2020 (12:08 IST)
ಸಿಡ್ನಿ: ಕೊರೋನಾ ಕಾರಣದಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್ ಸರಣಿಯನ್ನು ಸ್ಥಳಾಂತರಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ.


ಈ ಮೊದಲು ಮೆಲ್ಬೋರ್ನ್ ನಲ್ಲಿ ಪಂದ್ಯ ನಡೆಸಲು ಯೋಜನೆ ನಡೆಸಲಾಗಿತ್ತು. ಆದರೆ ಅಲ್ಲಿ ಕೊರೋನಾ ಹಾವಳಿ ಮಿತಿ ಮೀರಿರುವುದರಿಂದ ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಟೆಸ್ಟ್ ಸರಣಿಯನ್ನು ಅಡಿಲೇಡ್ ಗೆ ಸ್ಥಳಾಂತರಿಸಲು ಮಂಡಳಿ ಚಿಂತನೆ ನಡೆಸಿದೆ.

ಹೀಗಾಗಿ ಸರಣಿಯ ವೇಳಾಪಟ್ಟಿಯಲ್ಲೂ ಚಿಂತನೆ ನಡೆಸಲಾಗುತ್ತದೆ. ಅಡಿಲೇಡ್ ಮತ್ತು ಪರ್ಥ್ ನಲ್ಲಿಯೂ ಪಂದ್ಯ ನಡೆಸುವ ಯೋಜನೆ ಆಸ್ಟ್ರೇಲಿಯಾ ಮಂಡಳಿಯದ್ದಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ