ಭಾರತ-ನ್ಯೂಜಿಲೆಂಡ್ ಟೆಸ್ಟ್: ಟೀಂ ಇಂಡಿಯಾದ್ದು ಮತ್ತದೇ ರಾಗ

ಶನಿವಾರ, 29 ಫೆಬ್ರವರಿ 2020 (09:31 IST)
ಕ್ರಿಸ್ಟ್ ಚರ್ಚ್: ಯಾಕೋ ನ್ಯೂಜಿಲೆಂಡ್ ನಲ್ಲಿ ಟಿ20 ಸರಣಿ ಗೆದ್ದಿದ್ದಷ್ಟೇ ಬಂತು. ಟೀಂ ಇಂಡಿಯಾ ಮತ್ತೆಲ್ಲಾ ಸೋಲುಗಳ ಮೇಲೆ ಸೋಲು ಕಾಣುತ್ತಲೇ ಇದೆ. ದ್ವಿತೀಯ ಟೆಸ್ಟ್ ನಲ್ಲೂ ಅದೇ ರಾಗ ಹಾಡಿದೆ.


ಕ್ರಿಸ್ಟ್ ಚರ್ಚ್ ನಲ್ಲಿ ನಡೆಯುತ್ತಿರುವವ ಮೊದಲ ಟೆಸ್ಟ್ ನಲ್ಲಿ ಮತ್ತೆ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಬ್ಯಾಟಿಂಗ್ ಗಿಳಿಸಿದೆ. ಮೊದಲ ದಿನದ ಚಹಾ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.

ಆರಂಭಿಕ ಪೃಥ್ವಿ ಶಾ 54, ಹನುಮ ವಿಹಾರಿ 55 ರನ್ ಗಳಿಸಿ ಔಟಾದರೆ, ಚೇತೇಶ್ವರ ಪೂಜಾರ 53 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಾಯಕ ಕೊಹ್ಲಿ ಮತ್ತೆ ವಿಫಲರಾಗಿದ್ದು ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅಜಿಂಕ್ಯಾ ರೆಹಾನೆ ಕೂಡಾ 7 ರನ್ ಗೆ ಇನಿಂಗ್ಸ್ ಕೊನೆಗೊಳಿಸಿದ್ದಾರೆ. ಇದೀಗ ಪೂಜಾರ ಮತ್ತು ರಿಷಬ್ ಪಂತ್ ಎಷ್ಟು ಹೊತ್ತಿನವರಿಗೆ ಇನಿಂಗ್ಸ್ ಮುಂದುವರಿಸುತ್ತಾರೆ ಎಂಬುದರ ಮೇಲೆ ಭಾರತದ ಮೊದಲ ಇನಿಂಗ್ಸ್ ಅವಲಂಬಿಸಿದೆ. ಈ ಪಂದ್ಯಕ್ಕೆ ಗಾಯಗೊಂಡ ಇಶಾಂತ್ ಶರ್ಮಾ ಬದಲಿಗೆ ಉಮೇಶ್ ಯಾದವ್ ಕಣಕ್ಕಿಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ