ಆಸ್ಟ್ರೇಲಿಯನ್ನರ ಕಂಗೆಡಿಸಿದ ಟೀಂ ಇಂಡಿಯಾ ಬೌಲರ್ ಗಳು

ಶುಕ್ರವಾರ, 7 ಡಿಸೆಂಬರ್ 2018 (13:03 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನದಂತ್ಯಕ್ಕೆ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ.


ಟೀಂ ಇಂಡಿಯಾ ಬೌಲರ್ ಗಳ ಸಂಘಟಿತ ಹೋರಾಟಕ್ಕೆ ಬೆಚ್ಚಿದ ಆಸ್ಟ್ರೇಲಿಯನ್ನರು ಸದ್ಯಕ್ಕೆ ಎಂದೂ ಮಾಡದಷ್ಟು ನಿಧಾನಗತಿಯ ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಪ್ರತೀ ಓವರ್ ನಲ್ಲೂ ಲಯ ಕಳೆದುಕೊಳ್ಳದೇ ಆಡಿದರೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ದಿನದಂತ್ಯಕ್ಕೆ ಬಿಗು ದಾಳಿ ನಡೆಸಿದರು. ಅಶ್ವಿನ್ 3, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಸಿಕ್ಕಿದೆ.

ಆಸೀಸ್ ಭಾರತದ ಮೊದಲ ಇನಿಂಗ್ಸ್ ದಾಟಲು ಇನ್ನೂ 59 ರನ್ ಗಳಿಸಬೇಕಿದೆ. ಕ್ರೀಸ್ ನಲ್ಲಿ ಇದೀಗ ಟ್ರಾವಿಸ್ ಹೆಡ್ 61 ಮತ್ತು 8 ರನ್ ಗಳಿಸಿದ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಹುಶಃ ಟ್ರಾವಿಸ್ ಹೆಡ್ ತಾಳ್ಮೆಯ ಇನಿಂಗ್ಸ್ ಆಡದೇ ಇದ್ದಿದ್ದರೆ ಆಸೀಸ್ ಈಗಾಗಲೇ ಆಲೌಟ್ ಆಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ