ಟೀಂ ಇಂಡಿಯಾ ಕ್ರಿಕೆಟಿಗರಿಗೂ ಶುರುವಾಗಿದೆ ಫುಟ್ಬಾಲ್ ಜ್ವರ!

ಶನಿವಾರ, 14 ಜುಲೈ 2018 (09:19 IST)
ಲಾರ್ಡ್ಸ್: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯಲಿದೆ. ಹಾಗಿದ್ದರೂ ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ಮರೆತು ಫುಟ್ಬಾಲ್ ಜಪ ಶುರು ಮಾಡಿದ್ದಾರೆ!

ಭಾನುವಾರ ಅಂದರೆ ನಾಳೆ ಫಿಫಾ 2018 ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯ ಕ್ರೊವೇಷಿಯಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ. ಇಡೀ ವಿಶ್ವವೇ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ಎದುರು ನೋಡುತ್ತಿದೆ. ಇದರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರೂ ಹೊರತಲ್ಲ.

ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಈಗಾಗಲೇ ತಮ್ಮ ಫೇವರಿಟ್ ತಂಡ ಯಾವುದೆಂಬುದನ್ನು ಹೇಳಿಕೊಂಡಿದ್ದಾರೆ. ಇಬ್ಬರೂ ಫ್ರಾನ್ಸ್ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರೂ ಫುಟ್ಬಾಲ್ ಇಷ್ಟಪಡುತ್ತಾರೆ. ಆದರೆ ಫುಟ್ಬಾಲ್ ಜಪದ ನಡುವೆ ತಮ್ಮ ಇಂದಿನ ಪಂದ್ಯದ ಬಗ್ಗೆ ಗಮನ ಕಡಿಮೆಯಾಗದಿರಲಿ ಎಂಬುದು ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ