ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯನ್ನರದ್ದೇ ಮೇಲುಗೈ
ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಟಾಪ್ 5 ರೊಳಗೆ ಟೀಂ ಇಂಡಿಯಾದ ಮೂವರು ಸ್ಥಾನ ಪಡೆದಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇದ್ದಾರೆ. ಭಾರತದ ಇನ್ನೊಬ್ಬ ಕ್ರಿಕೆಟಿಗ ಅಕ್ಸರ್ ಪಟೇಲ್ 5 ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಗರ ಪಟ್ಟಿಯಲ್ಲಿ ರಿಷಬ್ ಪಂತ್ 6 ಮತ್ತು ರೋಹಿತ್ ಶರ್ಮಾ 7 ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ನಂ.2, ಜಸ್ಪ್ರೀತ್ ಬುಮ್ರಾ ನಂ.5 ಮತ್ತು ರವೀಂದ್ರ ಜಡೇಜಾ ನಂ.9 ರಲ್ಲಿದ್ದಾರೆ. ಒಟ್ಟಾರೆ ತಂಡದ ಪಟ್ಟಿಯಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ನಂತರದ ಎರಡನೇ ಸ್ಥಾನ.