ಮಹಿಳಾ ಕ್ರಿಕೆಟಿಗರನ್ನು ರೊಚ್ಚಿಗೆಬ್ಬಿಸಿದ ಯುವರಾಜ್ ಸಿಂಗ್

ಬುಧವಾರ, 22 ಫೆಬ್ರವರಿ 2023 (10:53 IST)
ಮುಂಬೈ: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ನಾಳೆ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯವಾಡಲಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಗೆದ್ದಿದ್ದು ಅಪರೂಪ. ಅದರಲ್ಲೂ ವಿಶ್ವಕಪ್ ಗಳಲ್ಲಿ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ತಂಡ ಸಿಕ್ಕರೆ ಭಾರತೀಯರು ಸೋಲುವುದು ಖಚಿತ ಎಂಬ ಸ್ಥಿತಿಯಿದೆ.

ಆದರೆ ಈ ಬಾರಿಯಾದರೂ ಆ ಅಪವಾದ ಕಳೆದು ಭಾರತ ಫೈನಲ್ ಗೇರಬೇಕು ಎಂಬುದು ಎಲ್ಲರ ಕನಸು. ಅದೇ ರೀತಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹರ್ಮನ್ ಪ್ರೀತ್ ಕೌರ್ ಪಡೆಯನ್ನು ವಿಡಿಯೋ ಮೂಲಕ ರೊಚ್ಚಿಗೇಳುವಂತೆ ಮಾಡಿದ್ದಾರೆ. ಗೂಗಲ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಯಾರು ಎಂದು ಪ್ರಶ್ನೆ ಟೈಪ್ ಮಾಡಿದರೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಹೆಸರು ಬರುತ್ತದೆ. ಆದರೆ ಮಹಿಳಾ ನಾಯಕಿಯ ಹೆಸರೇ ಬರಲ್ಲ. ಈ ವಿಡಿಯೋ ಶೇರ್ ಮಾಡಿರುವ ಯುವರಾಜ್ ಇನ್ನು ಮುಂದೆ ಮಹಿಳಾ ತಂಡದ ನಾಯಕಿಯ ಹೆಸರೂ ಬರುವಂತೆ ಮಾಡಬೇಕು ಎಂದು ಹುರಿದುಂಬಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ