ಬಾರ್ಡರ್-ಗವಾಸ್ಕರ್ ಟೆಸ್ಟ್: ಆಸೀಸ್ ಗೆ ದಿಟ್ಟ ಪ್ರತ್ಯುತ್ತರ ನೀಡುತ್ತಿರುವ ಟೀಂ ಇಂಡಿಯಾ

ಶನಿವಾರ, 11 ಮಾರ್ಚ್ 2023 (17:08 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಮೂರನೇ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 289 ರನ್ ಗಳೊಂದಿಗೆ ದಿನದಾಟ ಮುಗಿಸಿದೆ.

ಇಂದಿನ ದಿನವಿಡೀ ಟೀಂ ಇಂಡಿಯಾ ಬ್ಯಾಟಿಗರು ಎದುರಾಳಿ ಬೌಲರ್ ಗಳನ್ನು ಸುಸ್ತಾಗುವಂತೆ ವಿಕೆಟ್ ಒಪ್ಪಿಸದೇ, ರನ್ ರೇಟ್ ಹೆಚ್ಚಿಸದೇ ಸತಾಯಿಸಿದರು. ನಿನ್ನೆ ಅಜೇಯರಾಗಿದ್ದ ಶುಬ್ಮನ್ ಗಿಲ್ ಇಂದು ಶತಕ ಸಿಡಿಸಿದ್ದು ಹೈಲೈಟ್. ಗಿಲ್ 235 ಎಸೆತಗಳಿಂದ 128 ರನ್ ಗಳಿಸಿ ಲಿಯೊನ್ ಗೆ ವಿಕೆಟ್ ಒಪ್ಪಿಸಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇದು ಅವರ ಎರಡನೇ ಮತ್ತು ತವರಿನಲ್ಲಿ ಮೊದಲ ಶತಕವಾಗಿತ್ತು.

ಇನ್ನೊಂದೆಡೆ ಸಾಥ್ ನೀಡುತ್ತಿದ್ದ ಪೂಜಾರ 42 ರನ್ ಗೆ ವಿಕೆಟ್ ಒಪ್ಪಿಸಿದರು. ಅವರ ನಂತರ ಬಂದ ವಿರಾಟ್ ಕೊಹ್ಲಿ 59 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, 16 ರನ್ ಗಳಿಸಿರುವ ರವೀಂದ್ರ ಜಡೇಜಾ ನಾಳೆಗೆ ವಿಕೆಟ್ ಕಾಯ್ದಿರಿಸಿದ್ದಾರೆ. ನಾಳೆ ಬೆಳಗಿನ ಅವಧಿಯಲ್ಲಿ ಟೀಂ ಇಂಡಿಯಾ ವೇಗವಾಗಿ ರನ್ ಗಳಿಸದೇ ಹೋದರೆ ಈ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗುವುದು ಖಚಿತ. ಭಾರತ ಇನ್ನೂ 191 ರನ್ ಗಳ ಹಿನ್ನಡೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ