ಸರಣಿ ಗೆಲ್ಲಲು ಟೀಂ ಇಂಡಿಯಾಗೆ 273 ರನ್ ಗುರಿ

ಬುಧವಾರ, 13 ಮಾರ್ಚ್ 2019 (17:21 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ಆಸೀಸ್ 273 ರನ್ ಗಳ ಗುರಿ ನೀಡಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಆರಂಭದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಭರ್ಜರಿಯಾಗಿತ್ತು. ಆರಂಭಿಕ ಉಸ್ಮಾನ್ ಖವಾಜ ಭರ್ತಿ 100 ರನ್ ಗಳಿಸಿದರೆ, ನಾಯಕ ಏರಾನ್ ಫಿಂಚ್ 27, ಪೀಟರ್ ಹ್ಯಾಂಡ್ಸ್ ಕೋಂಬ್ 52 ರನ್ ಗಳಿಸಿ ಭದ್ರ ತಳಪಾಯ ಹಾಕಿದ್ದರು.

ಆದರೆ 33 ನೇ ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದ್ದ ಆಸೀಸ್ ದಿಡೀರ್ ಕುಸಿತ ಕಂಡಿತು. ನಾಲ್ಕನೇ ಪಂದ್ಯದ ಹೀರೋ ಆಸ್ಟೋನ್ ಟರ್ನರ್ 20 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 1 ರನ್ ಗೆ ಪೆವಿಲಿಯನ್ ಗೆ ನಡೆದಿದ್ದು ಆಸೀಸ್ ಗೆ ದುಬಾರಿಯಾಯಿತು. ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ಕುಲದೀಪ್ ಯಾದವ್ ಪಾಲಾಯಿತು.

ಇದೀಗ ಸರಣಿ ಗೆಲ್ಲಲು ಟೀಂ ಇಂಡಿಯಾ 273 ರನ್ ಗಳಿಸಬೇಕಿದೆ. ಆದರೆ ರಾತ್ರಿ ವೇಳೆ ಇಬ್ಬನಿ ಫ್ಯಾಕ್ಟರ್ ಪ್ರಧಾನವಾಗಿದ್ದು, ಇಲ್ಲಿ ಬ್ಯಾಟಿಂಗ್ ನಡೆಸುವುದು ಕಷ್ಟವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ