ಶಾನ್ ಮಾರ್ಷ್ ಶತಕದ ಹೊರತಾಗಿಯೂ ಕೊನೆಯಲ್ಲಿ ಕುಸಿದ ಆಸ್ಟ್ರೇಲಿಯಾ

ಮಂಗಳವಾರ, 15 ಜನವರಿ 2019 (12:41 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಟೀಂ ಇಂಡಿಯಾಗೆ ಗೆಲ್ಲಲು 299 ರನ್ ಗಳ ಗುರಿ ನೀಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್  ಗಳಿಸಿತು. ಶಾನ್ ಮಾರ್ಷ್ ಗಳಿಸಿದ ಭರ್ಜರಿ ಶತಕ (131)ದ ನೆರವಿನಿಂದ ಆಸ್ಟ್ರೇಲಿಯಾ ಆರಂಭದಲ್ಲಿ ನಿಧಾನಗತಿಯ ಇನಿಂಗ್ಸ್ ಆರಂಭಿಸಿದರೂ ಕೊನೆಯಲ್ಲಿ ರನ್ ಗತಿ ಏರಿಸಲು ಸಾಧ್ಯವಾಯಿತು. ಮ್ಯಾಕ್ಸ್ ವೆಲ್ ಕೂಡಾ ಕೊನೆಯಲ್ಲಿ 37 ಬಾಲ್ ಗಳಲ್ಲಿ 48 ರನ್ ಗಳಿಸಿ ಮಾರ್ಷ್ ಗೆ ತಕ್ಕ ಸಾಥ್ ನೀಡಿದರು.

ಭಾರತದ ಪರ ಭುವನೇಶ್ವರ್ ಕುಮಾರ್ 4, ಮೊಹಮ್ಮದ್ ಶಮಿ ವಿಕೆಟ್ 3, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ಕೊನೆಯ ಎರಡು ಓವರ್ ಗಳಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಆಸ್ಟ್ರೇಲಿಯಾಕ್ಕೆ ನಿರೀಕ್ಷಿತ ರನ್ ಗಳಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ