ಟೀಂ ಇಂಡಿಯಾಗೆ ಬಂತು ಅಭಿಮಾನಿಗಳ ಜೆರ್ಸಿ

ಸೋಮವಾರ, 19 ಸೆಪ್ಟಂಬರ್ 2022 (08:00 IST)
ಮುಂಬೈ: ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಹೊಸ ವಿನ್ಯಾಸದ ಜೆರ್ಸಿ ಬಂದಿದೆ. ನಿನ್ನೆ ಮುಂಬೈನಲ್ಲಿ ಹೊಸ ಸಮವಸ್ತ್ರ ಅನಾವರಣಗೊಂಡಿದೆ.

ಹೊಸ ಜೆರ್ಸಿಯಲ್ಲಿ ತೋಳಿನ ಭಾಗ ಕಡು ನೀಲಿ ಬಣ‍್ಣದಿಂದ ಕೂಡಿದ್ದು, ಉಳಿದಂತೆ ತಿಳಿ ನೀಲಿ ಬಣ್ಣ ಹೊಂದಿದೆ. ಇದು ಅಭಿಮಾನಿಗಳ ಜೆರ್ಸಿ ಎಂದು ಬಿಸಿಸಿಐ ಘೋಷಿಸಿದೆ.

ಪುರುಷರ ತಂಡದ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಜೊತೆಗೆ ಮಹಿಳಾ ಕ್ರಿಕೆಟಿಗರಾದ ಹರ್ಮನ್ ಪ್ರೀತ್ ಕೌರ್, ಶಫಾಲಿ ವರ್ಮ ಹೊಸ ಜೆರ್ಸಿಯೊಂದಿಗೆ ಪೋಸ್ ನೀಡಿದ್ದಾರೆ.

ನಿನ್ನೆ ಸಂಜೆ ಮುಂಬೈನಲ್ಲಿ ಜೆರ್ಸಿಯ ಅಧಿಕೃತ ಪ್ರಾಯೋಜಕ ಸಂಸ್ಥೆ ಕಾರ್ಯಕ್ರಮ ಆಯೋಜಿಸಿ ನೂತನ ಜೆರ್ಸಿ ಅನಾವರಣಗೊಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ