ಮುಂಬೈ: 2022 ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ದಿಗ್ವಿಜಯ ಸಾಧಿಸಿದೆ. ಈ ವರ್ಷ ಭಾರತ ಒಂದೇ ಒಂದು ಟಿ20 ಸರಣಿ ಸೋತಿಲ್ಲ ಎನ್ನುವುದು ವಿಶೇಷ.
ಈಗಷ್ಟೇ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಸರಣಿ ಗೆದ್ದಿದ್ದ ಟೀಂ ಇಂಡಿಯಾ ಈಗ ದ.ಆಫ್ರಿಕಾ ವಿರುದ್ಧ ತನ್ನ ದಿಗ್ವಿಜಯ ಮುಂದುವರಿಸಲು ಹೊರಟಿದೆ.
ಈ ವರ್ಷ ಮೊದಲು ನ್ಯೂಜಿಲೆಂಡ್ ವಿರುದ್ಧ ರೋಹಿತ್ ನೇತೃತ್ವದಲ್ಲಿ 3-0 ಅಂತರದ ಸರಣಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಬಳಿಕ ಸತತವಾಗಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇದಾದ ಬಳಿಕ ರಿಷಬ್ ಪಂತ್ ನೇತೃತ್ವದಲ್ಲಿ ದ.ಆಫ್ರಿಕಾ ವಿರುದ್ಧ 2-2 ಅಂತರದಿಂದ ಸರಣಿ ಸಮಬಲ ಮಾಡಿಕೊಂಡಿತು. ಬಳಿಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು.
ಇದಾದ ಬಳಿಕ ರೋಹಿತ್ ಶರ್ಮಾ ನಾಯಕರಾಗಿ ಇಂಗ್ಲೆಂಡ್ (2-1), ವೆಸ್ಟ್ ಇಂಡೀಸ್ ವಿರುದ್ಧ (4-1), ಇದೀಗ ಆಸ್ಟ್ರೇಲಿಯಾ ವಿರುದ್ಧ (2-1) ರಣಿ ಗೆಲುವು ಸಾಧಿಸಿದೆ.