Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Krishnaveni K

ಶುಕ್ರವಾರ, 13 ಜೂನ್ 2025 (15:45 IST)
ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಾಯಿಗೆ ಹೃದಯಾಘಾತವಾಗಿದೆ ಎನ್ನಲಾಗಿದ್ದು ಇಂಗ್ಲೆಂಡ್ ಸರಣಿಯನ್ನು ಅರ್ಧಕ್ಕೇ ಬಿಟ್ಟು ಗಂಭೀರ್ ತವರಿಗೆ ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ.
 

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುವುದಕ್ಕಾಗಿ ಗಂಭೀರ್ ಆಂಗ್ಲರ ನಾಡಿಗೆ ಕಳೆದ ವಾರ ತಂಡದ ಜೊತೆ ಪ್ರಯಾಣ ಬೆಳೆಸಿದ್ದರು. ಆದರೆ ಇದರ ನಡುವೆ ಅವರ ತಾಯಿಯ ಅನಾರೋಗ್ಯದ ಸುದ್ದಿ ಆಘಾತದಂತೆ ಬಂದೆರಗಿದೆ. ಹೀಗಾಗಿ ಸರಣಿಯನ್ನು ಅರ್ಧಕ್ಕೇ ಬಿಟ್ಟು ಗಂಭೀರ್ ದೆಹಲಿಗೆ ಮರಳಿದ್ದಾರೆ.

ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ತಾಯಿ ಚೇತರಿಕೆ ನಂತರವಷ್ಟೇ ಗಂಭೀರ್ ಮತ್ತೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ