Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ
ರೋಹಿತ್ ಶರ್ಮಾ ನಿವೃತ್ತಿಯಾದ ಬಳಿಕ ಟೀಂ ಇಂಡಿಯಾ ಟೆಸ್ಟ್ ನಾಯಕರಾಗಿ ಶುಬ್ಮನ್ ಗಿಲ್ ರನ್ನು ಆಯ್ಕೆ ಮಾಡಲಾಗಿದೆ. ಇದೀಗ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಗಿಲ್ ಭಾರತ ತಂಡದ ನಾಯಕರಾಗಿರಲಿದ್ದಾರೆ.
ಈ ನಡುವೆ ಅವರ ಫೋಟೋ ಶೂಟ್ ಕ್ಷಣಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದರಲ್ಲಿ ಗಿಲ್ ಬ್ಯಾಟ್ ಮೇಲೆ ಪ್ರಿನ್ಸ್ ಎಂದು ಬರೆದಿರುವುದು ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಿಲ್ ರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಪ್ರಿನ್ಸ್ ಎಂದು ಕರೆಯುವುದಿದೆ. ಹಾಗಂತ ಅವರು ಅದನ್ನೇ ಬ್ಯಾಟ್ ಗೆ ಹಚ್ಚಿಕೊಂಡು ಆಟಿಟ್ಯೂಡ್ ತೋರಿಸುತ್ತಿದ್ದಾರೆ ಎಂಬುದು ನೆಟ್ಟಿಗರ ಆಕ್ರೋಶವಾಗಿದೆ. ಸಚಿನ್ ರನ್ನು ಕ್ರಿಕೆಟ್ ದೇವರು ಎನ್ನುತ್ತಿದ್ದರು. ಕೊಹ್ಲಿಯನ್ನು ಕಿಂಗ್ ಎನ್ನುತ್ತಾರೆ. ಹಾಗಂತ ಎಂದೂ ಅವರು ಅದನ್ನು ತಮ್ಮ ಬ್ಯಾಟ್ ಮೇಲೆ ಬರೆಯಿಸಿಕೊಂಡು ತಮ್ಮನ್ನು ತಾವು ಕೊಚ್ಚಿಕೊಂಡಿಲ್ಲ ಎನ್ನುವುದು ಅಭಿಮಾನಿಗಳ ವಾದವಾಗಿದೆ.