ಲಂಕಾ ವಿರುದ್ಧ ಇಂದೇ ಗೆಲ್ಲಲಿದೆ ಟೀಂ ಇಂಡಿಯಾ!
ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ನೀಡಿದ್ದ 447 ರನ್ ಗಳ ಗುರಿ ಬೆನ್ನತ್ತಿರುವ ಲಂಕಾ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಆರಂಭಿಕ ಲಹಿರು ತಿರಮನ್ನೆ ಬುಮ್ರಾ ಬೌಲಿಂಗ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಎಚ್ಚರಿಕೆಯ ಆಟಕ್ಕೆ ಕೈ ಹಾಕಿದ ಧಿಮುತು ಕರುಣರತ್ನೆ 10 ರನ್ ಗಳಿಸಿದ್ದು, ಅವರಿಗೆ ಸಾಥ್ ನೀಡಿರುವ ಕುಸಾಲ್ ಮೆಂಡಿಸ್ 16 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಲಂಕಾ ಗೆಲುವಿಗೆ ಇನ್ನೂ 419 ರನ್ ಗಳ ಅಗತ್ಯವಿದೆ.
ಸದ್ಯ ಭಾರತದ ಬೌಲಿಂಗ್ ನೋಡುತ್ತಿದ್ದರೆ ಪಂದ್ಯ ಮೂರನೆಯ ದಿನವಾದ ಇಂದೇ ಮುಕ್ತಾಯಗೊಳ್ಳುವ ಎಲ್ಲಾ ಸೂಚನೆಯಿದೆ.