ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬೇಕಾದರೆ ಅದೂ ಟೆಸ್ಟ್ ಸರಣಿಯಲ್ಲಿ ಯಾವುದೇ ತಂಡದ ಬ್ಯಾಟಿಂಗ್ ಬಲವಾಗಿರಬೇಕು. ಹೀಗಾಗಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಅಭ್ಯಾಸ ಪಂದ್ಯದಲ್ಲಿ ಕೊನೆಗೂ ಲಯ ಕಂಡುಕೊಂಡಿದ್ದಾರೆ.
ಹಲವು ತಿಂಗಳುಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡಿರದ ಚೇತೇಶ್ವರ ಪೂಜಾರಗೂ ಮೈದಾನಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ವಿರಾಟ್ ಕೊಹ್ಲಿ ಕೂಡಾ ಅಲಭ್ಯರಾದರೆ ತಂಡದ ಬ್ಯಾಟಿಂಗ್ ಸಂಪೂರ್ಣ ಬಡವಾಗಲಿದೆ. ಕೆಎಲ್ ರಾಹುಲ್, ಪೂಜಾರ, ಅಜಿಂಕ್ಯಾ ರೆಹಾನೆ ಹೆಚ್ಚಿನ ಜವಾಬ್ಧಾರಿ ಹೊರಬೇಕಾಗುತ್ತದೆ. ಬ್ಯಾಟಿಂಗ್ ಹುಳುಕುಗಳನ್ನು ಸರಿಪಡಿಸದೇ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಯಶಸ್ಸು ಕಾಣದು. ಹೀಗಾಗಿ ಅಭ್ಯಾಸ ಪಂದ್ಯ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಉತ್ತಮ ವೇದಿಕೆಯಾಗಿದೆ. ಹನುಮ ವಿಹಾರಿ, ಶಬ್ನಂ ಗಿಲ್ ಮುಂತಾದ ಯುವಕರು ಫಾರ್ಮ್ ಪ್ರದರ್ಶಿಸಿರುವುದು ಭಾರತಕ್ಕೆ ದೊಡ್ಡ ರಿಲೀಫ್ ಆಗಿದೆ.