ಟೀಂ ಇಂಡಿಯಾ ಆಟಗಾರರು ಬಿಸಿಲಲ್ಲೂ ಫಿಟ್ ಆಗಿರುವ ರಹಸ್ಯವೇನು ಗೊತ್ತಾ?
ಹೈದರಾಬಾದ್, ರಾಜ್ ಕೋಟ್ ಟೆಸ್ಟ್ ಪಂದ್ಯಗಳಲ್ಲಿ ಉರಿಬಿಸಿಲಿನ ಮಧ್ಯೆ ಆಟಗಾರರು ಪಂದ್ಯವಾಡಿದ್ದರು. ಆದರೆ ಈ ಉರಿಬಿಸಿಲಿಗೆ ಮೈ ಒಡ್ಡಿದ ಮೇಲೆ ಫಿಟ್ ಆಗಿರಲು ಆಟಗಾರರು ಐಸ್ ನೀರಿನ ಸ್ನಾನ ಮಾಡುತ್ತಾರಂತೆ.
ವಿಪರೀತ ಬಿಸಿಲಿರುವಾಗ ದೇಹ ನಿರ್ಜಲೀಕರಣಕ್ಕೊಳಗಾಗುವ ಸಾಧ್ಯತೆಯಿದೆ. ಸಹಜವಾಗಿಯೇ ಇದರಿಂದ ಫಿಟ್ನೆಸ್ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಆಟಗಾರರು ಐಸ್ ಸ್ನಾನದ ಮೊರೆ ಹೋಗಿದ್ದಾರೆ ಎಂದು ಶಂಕರ್ ಬಸು ಹೇಳಿದ್ದಾರೆ.