ಐಪಿಎಲ್ ನಿಂದ ಈ ಲಾಭವಾಗಿದೆಯಂತೆ ಟೀಂ ಇಂಡಿಯಾಗೆ!

ಮಂಗಳವಾರ, 3 ಜುಲೈ 2018 (13:41 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಿಂದ ತಮಗೆ ಲಾಭವಾಗಿದೆ ಎಂದಿದ್ದಾರೆ.

ಐಪಿಎಲ್ ನಲ್ಲಿ ವಿದೇಶೀ ಆಟಗಾರರು ಜತೆಯಾಗಿ ಆಡುತ್ತಾರೆ. ಇಂಗ್ಲೆಂಡ್ ಆಟಗಾರರ ಜತೆಗೆ ಐಪಿಎಲ್ ಸಂದರ್ಭದಲ್ಲಿ ಆಡಿರುವ ಕಾರಣ ನಮ್ಮ ತಂಡದ ಆಟಗಾರರಿಗೆ ಅವರ ಹುಳುಕುಗಳೇನೆಂದು ಚೆನ್ನಾಗಿ ಗೊತ್ತು. ಹೀಗಾಗಿ ಅವರ ಜತೆ ಆಡುವುದಕ್ಕೆ ಸುಲಭವಾಗಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ನ ಪ್ರಮುಖ ಆಟಗಾರರಾದ ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ ಜತೆಗೆ ನಾನು ಐಪಿಎಲ್ ನಲ್ಲಿ ಆಡಿದ್ದೇನೆ. ಹಾಗಾಗಿ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಅವರ ಈ ಆತ್ಮವಿಶ್ವಾಸ ಆಟದಲ್ಲಿ ಎಷ್ಟರ ಮಟ್ಟಿಗೆ ಕಾಣುತ್ತದೋ ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ