ಪರ್ತ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಫೋನ್ ಇಲ್ಲ, ಕಂಪ್ಲೀಟ್ ಲಾಕ್ ಡೌನ್

Krishnaveni K

ಬುಧವಾರ, 13 ನವೆಂಬರ್ 2024 (11:22 IST)
Photo Credit: X
ಪರ್ತ್: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆಡಲು ವಾರ ಮುಂಚಿತವಾಗಿಯೇ ಬಂದಿಳಿದಿರುವ ಟೀಂ ಇಂಡಿಯಾ ಕಂಪ್ಲೀಟ್ ಲಾಕ್ ಡೌನ್ ಆಗಿದೆ.

ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಟೀಂ ಇಂಡಿಯಾ ನಿನ್ನೆಯಿಂದಲೇ ಪರ್ತ್ ನಲ್ಲಿ ಅಭ್ಯಾಸ ಆರಂಭಿಸಿದೆ. ಆದರೆ ಕ್ರಿಕೆಟಿಗರ ಅಭ್ಯಾಸ ವೀಕ್ಷಣೆಗೆ ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ. ಸೀಕ್ರೆಟ್ ಆಗಿ ಟ್ರೈನಿಂಗ್ ನಡೆಸಲಾಗುತ್ತಿದೆ. ಜೊತೆಗೆ ಕ್ರಿಕೆಟಿಗರಿಗೆ ಮೊಬೈಲ್ ಬಳಕೆಗೂ ನಿರ್ಬಂಧ  ವಿಧಿಸಲಾಗಿದೆ ಎಂಬ ಮಾತು ಕೇಳಿಬಂದಿದೆ.

ಇದಕ್ಕೆಲ್ಲಾ ಕಾರಣ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನ. ಮೂರಕ್ಕೆ ಮೂರೂ ಟೆಸ್ಟ್ ಪಂದ್ಯಗಳನ್ನು ಸೋತು ಈಗ ಆಸೀಸ್ ವಿರುದ್ಧ ಎಲ್ಲಾ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಕಠಿಣ ನಿಯಮಗಳನ್ನು ಹೇರಲಾಗಿದೆ.

ಈ ಸರಣಿಗೆ ಮುನ್ನ ಬಿಸಿಸಿಐ ಕೋಚ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಜೊತೆ ಸುದೀರ್ಘ ಮೀಟಿಂಗ್ ನಡೆಸಿತ್ತು. ಅದರ ಪರಿಣಾಮವೇ ಈ ಸ್ಟ್ರಿಕ್ ನಿಯಮಗಳು ಎನ್ನಲಾಗುತ್ತಿದೆ. ಮೈದಾನ ಸಿಬ್ಬಂದಿಗಳಿಗೂ ಪ್ರಾಕ್ಟೀಸ್ ಸೆಷನ್ ವಿಡಿಯೋ ಮಾಡದಂತೆ, ಅದನ್ನು ಹೊರಹಾಕದಂತೆ ಮತ್ತು ಮೊಬೈಲ್ ಬಳಸದಂತೆ ಸೂಚನೆ ನೀಡಲಾಗಿದೆಯಂತೆ.  ಇವಿಷ್ಟೂ ದಿನಗಳು ಟೀಂ ಇಂಡಿಯಾ ಕ್ರಿಕೆಟಿಗರು ಹೊರಗೆ ಸುತ್ತಾಡುವ ಬದಲು ಕೇವಲ ಅಭ್ಯಾಸದ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಲು ನಿಯಮ ಹಾಕಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ