ಭಾರತ-ಬಾಂಗ್ಲಾ ಟೆಸ್ಟ್: ಪೂಜಾರ, ಗಿಲ್ ಶತಕ, ಬಾಂಗ್ಲಾ ಪ್ರತ್ಯುತ್ತರ

ಶುಕ್ರವಾರ, 16 ಡಿಸೆಂಬರ್ 2022 (16:17 IST)
Photo Courtesy: Twitter
ಚಿತ್ತಗಾಂಗ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಇದರೊಂದಿಗೆ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 513 ರನ್ ಗಳ ಗುರಿ ನೀಡಿತು. ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಶುಬ್ನಂ ಗಿಲ್ 110 ರನ್ ಮತ್ತು ಚೇತೇಶ್ವರ ಪೂಜಾರ ಅಜೇಯ 102 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಗಿಲ್ ಗೆ ಇದು ಚೊಚ್ಚಲ ಟೆಸ್ಟ್ ಶತಕವಾಗಿದ್ದರೆ, ಪೂಜಾರಗೆ 19 ನೆಯ ಶತಕವಾಗಿತ್ತು.

ಈ ಮೊತ್ತ ಬೆನ್ನತ್ತಿರುವ ಬಾಂಗ್ಲಾ ದಿಟ್ಟ ಹೋರಾಟ ನಡೆಸಿದೆ. ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 12 ಓವರ್ ಗಳಲ್ಲಿ 42 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.  ನಜ್ಮುಲ್ ಹೊಸೈನ್ 25, ಝಾಕಿರ್ ಹಸನ್ 17  ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ