ಭಾರತ-ಬಾಂಗ್ಲಾ ಟೆಸ್ಟ್: ಉತ್ತಮ ಮೊತ್ತದತ್ತ ಟೀಂ ಇಂಡಿಯಾ
ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ರವಿಚಂದ್ರನ್ ಅಶ್ವಿನ್ 40, ಕುಲದೀಪ್ ಯಾದವ್ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಿನ್ನೆ ಅಜೇಯರಾಗುಳಿದಿದ್ದ ಶ್ರೇಯಸ್ ಅಯ್ಯರ್ ಇಂದು ನಾಲ್ಕು ರನ್ ಸೇರಿಸುವಲ್ಲಿ ಔಟಾದರು. 86 ರನ್ ಗೆ ಔಟಾದ ಅವರು ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದರು. ಇದೀಗ ಟೀಂ ಇಂಡಿಯಾ 400 ರ ಮೊತ್ತದತ್ತ ಗುರಿ ಇಟ್ಟಿದೆ.