ಆಸ್ಟ್ರೇಲಿಯಾ ಎದುರು ವೀರೋಚಿತ ಸೋಲುಂಡ ಭಾರತ ಮಹಿಳಾ ಕ್ರಿಕೆಟಿಗರು
ಕಳೆದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಭಾರತ ತಂಡ ಗೆಲುವು ಕಂಡಿತ್ತು. ಹೀಗಾಗಿ ಈ ಪಂದ್ಯದ ಮೇಲೆ ಭಾರೀ ನಿರೀಕ್ಷೆಯಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ದೊಡ್ಡ ಹೊಡೆತ ನೀಡಿದ್ದು ಸ್ಮೃತಿ ಮಂಧನಾ ವಿಕೆಟ್. ಕಳೆದ ಪಂದ್ಯದ ಹೀರೋ ಆಗಿದ್ದ ಸ್ಮೃತಿ ಈ ಪಂದ್ಯದಲ್ಲಿ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಶಫಾಲಿ ವರ್ಮ 41 ಎಸೆತಗಳದಲ್ಲಿ 52 ರನ್ ಗಳಿಸಿದರು. ಅವರು ಇರುವವರೆಗೂ ಭಾರತಕ್ಕೆ ಗೆಲುವಿನ ಭರವಸೆಯಿತ್ತು. ಆದರೆ ಶಫಾಲಿ ಜೊತೆಗೆ ರಿಚಾ ಘೋಷ್ ಕೂಡಾ ಔಟಾದ ಬಳಿಕ ಭಾರತ ಸೋಲಿನತ್ತ ಮುಖ ಮಾಡಿತು. ನಾಯಕಿ ಹರ್ಮನ್ ಪ್ರೀತ್ ಕವರ್ 37 ರನ್ ಗಳಿಸಿ ಔಟಾದರು. ಕೊನೆಯಲ್ಲಿ ದೀಪ್ತಿ ಶರ್ಮಾ ಅಜೇಯ 25 ರನ್ ಗಳಿಸಿದರೂ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ. ಇದರೊಂದಿಗೆ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು.