ನಾಲ್ಕನೇ ಟೆಸ್ಟ್ ಗೆ ಅಹಮ್ಮದಾಬಾದ್ ಗೆ ಬಂದಿಳಿದ ಟೀಂ ಇಂಡಿಯಾ
ಇಂಧೋರ್ ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತು. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆಯಬಹುದಾಗಿದೆ.
ಹೀಗಾಗಿ ಇಷ್ಟು ದಿನ ಇಂಧೋರ್ ನಲ್ಲಿಯೇ ಉಳಿದುಕೊಂಡು ಆಟಗಾರರು ಅಭ್ಯಾಸ ನಡೆಸಿದ್ದರು. ಇದೀಗ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ ಆಟಗಾರರು ಅಹಮ್ಮದಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ರೋಹಿತ್, ಕೊಹ್ಲಿ ನೇರವಾಗಿ ಅಹಮ್ಮದಾಬಾದ್ ನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.