ಅರ್ಜುನ ಅವಾರ್ಡ್ ಗೆ ಜಸ್ಪ್ರೀತ್ ಬುಮ್ರಾ ಹೆಸರು ಶಿಫಾರಸ್ಸು ಮಾಡಲಿರುವ ಬಿಸಿಸಿಐ

ಗುರುವಾರ, 14 ಮೇ 2020 (10:15 IST)
ಮುಂಬೈ: ಕ್ರೀಡಾ ಕ್ಷೇತ್ರಕ್ಕೆ ನೀಡಲಾಗುವ ಪ್ರತಿಷ್ಠಿತ ಅರ್ಜುನ ಅವಾರ್ಡ್ ಗೆ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಹೆಸರು ಶಿಫಾರಸ್ಸು ಮಾಡಲಿದೆ.


ಬುಮ್ರಾ ಜತೆಗೆ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಹೆಸರನ್ನೂ ಶಿಫಾರಸ್ಸು ಮಾಡುವ ಸಾಧ‍್ಯತೆಯಿದೆ. ಕಳೆದ ವರ್ಷವೂ ಬುಮ್ರಾ ಹೆಸರನ್ನು ಬಿಸಿಸಿಐ ಶಿಫಾರಸ್ಸು ಮಾಡಿತ್ತು. ಆದರೆ ರವೀಂದ್ರ ಜಡೇಜಾ ಪ್ರಶಸ್ತಿ ಗೆದ್ದಿದ್ದರು.

ಅರ್ಜುನ ಅವಾರ್ಡ್ ಪಡೆಯಲು ಸತತವಾಗಿ ಮೂರು ವರ್ಷ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡಿರಬೇಕು. ಹೀಗಾಗಿ ಈ ಬಾರಿ ಬುಮ್ರಾ ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ