ಟೆಸ್ಟ್ ನಲ್ಲಿ ನಂ.1 ಪಟ್ಟ ಕಾಯ್ದುಕೊಂಡ ಟೀಂ ಇಂಡಿಯಾ

ಬುಧವಾರ, 3 ಅಕ್ಟೋಬರ್ 2018 (08:49 IST)
ದುಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೂ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದೆ.

ಐಸಿಸಿ ಇತ್ತೀಚೆಗೆ ಬಿಡುಗಡೆಗೊಳಿಸಿದ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ 115 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 0-2 ರಿಂದ ಸರಣಿ ಕಳೆದುಕೊಂಡರೆ ಮಾತ್ರ ಟೀಂ ಇಂಡಿಯಾ ಅಗ್ರ ಸ್ಥಾನಕ್ಕೆ ಕುತ್ತು ಬರಲಿದೆ.

ಇನ್ನು ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದರೆ ಚೇತೇಶ್ವರ ಪೂಜಾರ ನಂ. 6 ಮತ್ತು ಕೆಎಲ್ ರಾಹುಲ್ 19 ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಪೈಕಿ ಭಾರತೀಯರಲ್ಲಿ ರವೀಂದ್ರ ಜಡೇಜಾ ನಾಲ್ಕು ಮತ್ತು ರವಿಚಂದ್ರನ್ ಅಶ್ವಿನ್ 8 ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ