ಚಾಂಪಿಯನ್ಸ್ ಟ್ರೋಫಿ ಸೋತರೂ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕಕ್ಕೆ ಕುಂದಿಲ್ಲ

ಮಂಗಳವಾರ, 20 ಜೂನ್ 2017 (09:45 IST)
ದುಬೈ: ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರೆ ಟೀಂ ಇಂಡಿಯಾ ಟೆಸ್ಟ್ ಮಾದರಿಯಂತೆ ಏಕದಿನ ಪಂದ್ಯಗಳಲ್ಲೂ ನಂ.1 ತಂಡವಾಗುತ್ತಿತ್ತು. ಆದರೂ ಐಸಿಸಿ ಶ್ರೇಯಾಂಕದಲ್ಲಿ ತನ್ನ ಮೊದಲಿನ ಸ್ಥಾನವನ್ನೇ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

 
ಟೀಂ ಇಂಡಿಯಾ 116 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. 119 ಅಂಕ ಹೊಂದಿರುವ ದ. ಆಫ್ರಿಕಾ  ಪ್ರಥಮ ಮತ್ತು 117 ಅಂಕ ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಪಾಕ್, ಬಾಂಗ್ಲಾದೇಶ ಮತ್ತು ಲಂಕಾ ತಂಡವನ್ನು ಹಿಂದಿಕ್ಕಿ 6 ನೇ ಸ್ಥಾನಕ್ಕೆ ನೆಗೆದಿದೆ.

ಇನ್ನು, ಬ್ಯಾಟ್ಸ್ ಮನ್ ಗಳ ಪೈಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅಗ್ರ ಟಾಪ್ 10 ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿರುವ ಭಾರತೀಯರು. ಬೌಲರ್ ಗಳ ಪೈಕಿ ಯಾವೊಬ್ಬ ಭಾರತೀಯ ಬೌಲರ್ ಗಳೂ ಸ್ಥಾನ ಪಡೆದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ