Asia Cup: ಲಂಕಾ ಪಡೆಯ ಅಜೇಯ ಓಟಕ್ಕೆ ಬ್ರೇಕ್‌ ಹಾಕಿ ಸೇಡು ತೀರಿಸಿಕೊಂಡ ಬಾಂಗ್ಲಾದೇಶ

Sampriya

ಭಾನುವಾರ, 21 ಸೆಪ್ಟಂಬರ್ 2025 (09:59 IST)
Photo Credit X
ದುಬೈ: ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಶ್ರೀಲಂಕಾ ತಂಡಕ್ಕೆ ದುರ್ಬಲ ಬಾಂಗ್ಲಾದೇಶ ಆಘಾತ ನೀಡಿದೆ. 

ಶನಿವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಸೈಫ್‌ ಹಸನ್‌ (61 ರನ್‌; 45ಎ) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ತೌಹಿದ್‌ ಹೃದಯ್ (58 ರನ್‌; 37ಎ) ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾ ತಂಡವು ಲಂಕಾಕಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು.

ಅಂತಿಮ ಓವರ್‌ವರೆಗೂ ತೀವ್ರ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಬಾಂಗ್ಲಾ ಬ್ಯಾಟರ್‌ಗಳು ತಂಡ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಲಂಕಾ ನೀಡಿದ್ದ 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಿಟನ್‌ ದಾಸ್‌ ಪಡೆಯು ಒಂದು ಎಸೆತ ಇರುವಂತೆ ಜಯ ಸಾಧಿಸಿತು. 

ಗುಂಪು ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಭರ್ಜರಿ ಆತ್ಮವಿಶ್ವಾಸದಲ್ಲಿದ್ದ ಚರಿತ ಅಸಲಂಕಾ ಬಳಗವು ಸೋಲಿನ ಆಘಾತ ಎದುರಿಸಿತು. ಗುಂಪು ಹಂತದ ಸೋಲಿಗೂ ಬಾಂಗ್ಲಾ ತಂಡವು ಸೇಡು ತೀರಿಸಿಕೊಂಡಿತು.

ಟಾಸ್ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಲಿಟನ್‌ ದಾಸ್‌ ಅವರ ಈ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್‌ ಮಾಡಿದ ಮೆಹದಿ ಹಸನ್ (25ಕ್ಕೆ2) ಹಾಗೂ ಮುಸ್ತಫಿಜುರ್ ರೆಹಮಾನ್ (20ಕ್ಕೆ3) ಅವರು ಲಂಕಾ ತಂಡವನ್ನು 20 ಓವರ್‌ಗಳಲ್ಲಿ 168 ರನ್‌ಗಳಿಗೆ ನಿಯಂತ್ರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ