ವೆಲ್ಲಿಂಗ್ಟನ್ ನಲ್ಲಿ ನ್ಯೂಜಿಲೆಂಡ್ ಬೆವರಿಳಿಸಿದ ಕನ್ನಡಿಗರು

ಶುಕ್ರವಾರ, 31 ಜನವರಿ 2020 (14:15 IST)
ವೆಲ್ಲಿಂಗ್ಟನ್: ಕನ್ನಡಿಗ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಬ್ಯಾಟಿಂಗ್ ಸಾಹಸದಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗಳಿಗೆ ಗೆಲ್ಲಲು 166 ರನ್ ಗಳ ಗುರಿ ನೀಡಿದೆ.


ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ನ್ಯೂಜಿಲೆಂಡ್ ಭಾರತದ ಅಗ್ರ ಬ್ಯಾಟ್ಸ್ ಮನ್ ಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿತು. ಆದರೆ ಕೆಳ ಕ್ರಮಾಂಕದಲ್ಲಿ ಮಿಂಚಿದ ಮನೀಶ್ ಪಾಂಡೆ 36 ಎಸೆತಗಳಲ್ಲಿ 50 ರನ್ ಗಳಿಸಿ ಭಾರತದ ಮೊತ್ತ ಉಬ್ಬಲು ನೆರವಾದರು.

ಭಾರತ ಇಂದು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾಗೆ ರೆಸ್ಟ್ ನೀಡಿತ್ತು. ರೋಹಿತ್ ಬದಲು ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಕೇವಲ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಕೆಎಲ್ ರಾಹುಲ್ ಎಂದಿನಂತೆ ಜವಾಬ್ಧಾರಿಯುತ ಆಟವಾಡಿ 26 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರು. ನಾಯಕ ಕೊಹ್ಲಿ ಕೇವಲ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಆಧಾರ ಸ್ತಂಬವಾಗಲಿಲ್ಲ. ಹೀಗಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 165 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ