ಭಾರತ-ನ್ಯೂಜಿಲೆಂಡ್ ನಾಲ್ಕನೇ ಟಿ20: ಬೆಂಚ್ ಹುಡುಗರಿಗೆ ಅವಕಾಶ ನೀಡಲಿರುವ ವಿರಾಟ್ ಕೊಹ್ಲಿ

ಶುಕ್ರವಾರ, 31 ಜನವರಿ 2020 (09:54 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ವೆಲ್ಲಿಂಗ್ಟನ್ ನ ವೆಸ್ಟ್ ಪ್ಯಾಕ್ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಭಾರತ ಸರಣಿ ಗೆದ್ದಿರುವುದರಿಂದ ಉಳಿದೆರಡು ಪಂದ್ಯಗಳು ಔಪಚಾರಿಕವೆನಿಸಲಿದೆ.


ಸರಣಿಯಲ್ಲಿ ಇದುವರೆಗೆ ಒಂದೂ ಪಂದ್ಯ ಗೆಲ್ಲದ ಅತಿಥೇಯ ತಂಡ ಪ್ರತಿಷ್ಠೆ ಉಳಿಸುವ ಸಲುವಾಗಿ ಉಳಿದೆರಡು ಪಂದ್ಯಗಳನ್ನು ಗೆಲ್ಲಲು ಪ್ರಯತ್ನ ನಡೆಸಲಿದೆ. ಕಳೆದ ಪಂದ್ಯದಲ್ಲಿ ದುರಾದೃಷ್ಟವಶಾತ್ ನ್ಯೂಜಿಲೆಂಡ್ ಸೂಪರ್ ಓವರ್ ನಲ್ಲಿ ಸೋಲಬೇಕಾಯಿತು. ಆದರೆ ಉಳಿದಂತೆ ಅತಿಥೇಯರ ಪ್ರದರ್ಶನ ಉತ್ತಮವಾಗಿತ್ತು.

ಈಗಾಗಲೇ ವಿರಾಟ್ ಕೊಹ್ಲಿ ಉಳಿದೆರಡು ಪಂದ್ಯಗಳನ್ನೂ ಗೆದ್ದು 5-0 ರಿಂದ ಸರಣಿ ಸ್ವೀಪ್ ಮಾಡುವುದೇ ಗುರಿ ಎಂದಿದ್ದಾರೆ. ಅದರ ಜತೆಗೆ ಇದುವರೆಗೆ ಸರಣಿಯಲ್ಲಿ ಆಡಲು ಅವಕಾಶ ಸಿಗದ ಬೆಂಚ್ ಹುಡುಗರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅದರಲ್ಲೂ ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ಮುಂತಾದ ಯುವ ಆಟಗಾರರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಉಳಿದೆರಡು ಪಂದ್ಯಗಳೂ ಭಾರತದ ಪಾಲಿಗೆ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸುವ ಪ್ರಯೋಗ ಪಂದ್ಯವಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ