ಸೂಪರ್ ಫೋರ್ ಪಂದ್ಯಕ್ಕೆ ಸಿದ್ಧತೆ ಶುರು ಮಾಡಿದ ಟೀಂ ಇಂಡಿಯಾ

ಗುರುವಾರ, 7 ಸೆಪ್ಟಂಬರ್ 2023 (15:52 IST)
ಕೊಲೊಂಬೊ: ಏಷ್ಯಾ ಕಪ್ ನಲ್ಲಿ ಭಾನವಾರ ಪಾಕಿಸ್ತಾನ ವಿರುದ್ಧ ಸೂಪರ್ ಫೋರ್ ಹಂತದ ಮೊದಲ ಪಂದ್ಯವಾಡಲಿರುವ ಟೀಂ ಇಂಡಿಯಾ ಕೊಲೊಂಬೋದಲ್ಲಿ ಅಭ್ಯಾಸ ಶುರು ಮಾಡಿದೆ.

ಕೋಚ್ ರಾಹುಲ್ ದ್ರಾವಿಡ್ ಕಣ್ಗಾವಲಿನಲ್ಲಿ ಟೀಂ ಇಂಡಿಯಾ ಆಟಗಾರರು ಕೊಲೊಂಬೋದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಒಳಾಂಗಣದಲ್ಲಿ ನೆಟ್ ಸೆಷನ್ ಮಾಡಿದ್ದಾರೆ.

ಮುಖ್ಯ ಕೋಚ್ ದ್ರಾವಿಡ್ ಖುದ್ದಾಗಿ ತಾವೇ ಪ್ರತಿಯೊಬ್ಬ ಆಟಗಾರನ ಬಳಿ ತೆರಳಿ ಸಲಹೆ ಸೂಚನೆ ನೀಡುತ್ತಿದ್ದುದು ಕಂಡುಬಂದಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಲೀಗ್ ಹಂತದಲ್ಲಿ ಭಾರತದ ಬ್ಯಾಟಿಂಗ್ ಕಳೆಗುಂದಿತ್ತು. ಮತ್ತೆ ಅದೇ ಸಮಸ್ಯೆಯಾಗದಂತೇ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ