ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯಗಳಿಗೂ ಮಳೆ ಭೀತಿ

ಗುರುವಾರ, 7 ಸೆಪ್ಟಂಬರ್ 2023 (08:10 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತ ಇದುವರೆಗೆ ಆಡಿದ ಎರಡೂ ಪಂದ್ಯಗಳಿಗೂ ಮಳೆ ಅಡಚಣೆ ಉಂಟು ಮಾಡಿತ್ತು. ಇದು ಇಷ್ಟಕ್ಕೇ ನಿಂತಿಲ್ಲ.

ಸೆಪ್ಟೆಂಬರ್ 10 ರಂದು ಕೊಲೊಂಬೋದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೂಪರ್ ಫೋರ್ ಹಂತದ ಮೊದಲ ಪಂದ್ಯವಾಡಲಿದೆ. ಶ್ರೀಲಂಕಾದಲ್ಲಿ ನಡೆಯುವ ಎಲ್ಲಾ ಸೂಪರ್ ಫೋರ್ ಹಂತದ ಪಂದ್ಯಗಳೂ ಕೊಲೊಂಬೋದಲ್ಲೇ ನಡೆಯುತ್ತಿವೆ.

ಆದರೆ ಹವಾಮಾನ ವರದಿ ಪ್ರಕಾರ ಇಲ್ಲಿ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಲೀಗ್ ಹಂತದಲ್ಲಿ ಭಾರತಕ್ಕೆ ಕಾಡಿದ್ದ ಮಳೆ ಸೂಪರ್ ಫೋರ್ ಹಂತದಲ್ಲೂ ಭೀತಿ ತಂದೊಡ್ಡಿದೆ. ಮಳೆ ಭೀತಿ ಹಿನ್ನಲೆಯಲ್ಲಿ ದುಬೈ ಅಥವಾ ಲಂಕಾದ ಬೇರೆ ಮೈದಾನದಲ್ಲಿ ಪಂದ್ಯ ಆಯೋಜಿಸುವಂತೆ ಮನವಿ ಮಾಡಿದರೂ ಎಸಿಸಿ ಅಧ್ಯಕ್ಷ ಜಯ್ ಶಾ ಒಪ್ಪಲಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ