ಚಾಂಪಿಯನ್ಸ್ ಟ್ರೋಫಿ ನಂತರ ಟೀಂ ಇಂಡಿಯಾ ವೇಳಾಪಟ್ಟಿ ಫಿಕ್ಸ್

ಬುಧವಾರ, 17 ಮೇ 2017 (08:19 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿ ಜೂನ್ ನಲ್ಲಿ ನಡೆಯಲಿದೆ. ಇದರ ನಂತರ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ಬಿಸಿಸಿಐ ಉತ್ತರ ಕೊಟ್ಟಿದೆ.

 
ಪ್ರತಿಷ್ಠಿತ ಟೂರ್ನಿಯ ನಂತರ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಮುಕ್ತಾಯಗೊಂಡ ಎರಡೇ ದಿನಕ್ಕೆ ಅಂದರೆ ಜೂನ್ 23 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವಾಡಲಿದೆ.

ಮೊದಲ ಪಂದ್ಯ ಟ್ರಿನಿಡಾಡ್ ನಲ್ಲಿ ನಡೆಯಲಿದೆ. ಒಟ್ಟು ನಾಲ್ಕು ಏಕದಿನ ಮತ್ತು ಒಂದು ಟಿ-20 ಪಂದ್ಯ ಆಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಂಡೀಸ್ ತಂಡ ಆಡುತ್ತಿಲ್ಲ. ಈ ಪ್ರತಿಷ್ಠಿತ ಟೂರ್ನಿಗೆ ಅದು ಅರ್ಹತೆ ಪಡೆದಿಲ್ಲ.

ಹಾಗಾಗಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಂಡ ತಕ್ಷಣ ಟೀಂ ಇಂಡಿಯಾ ವಿಂಡೀಸ್ ಗೆ ಪ್ರಯಾಣ ಬೆಳಸಲಿದೆ. 2013 ರ ನಂತರ ವಿಂಡೀಸ್ ಮತ್ತು ಭಾರತದ ನಡುವೆ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಸರಣಿ ಇದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ