ಭಾರತ-ದ.ಆಫ್ರಿಕಾ ತೃತೀಯ ಟೆಸ್ಟ್: ಟಾಪ್ 1 ಆಗಲು ವಿರಾಟ್ ಕೊಹ್ಲಿಗೆ ಸುವರ್ಣಾವಕಾಶ

ಶನಿವಾರ, 19 ಅಕ್ಟೋಬರ್ 2019 (08:39 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ವಿರುದ್ದ ಇಂದಿನಿಂದ ತೃತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ನ ನಂ.1 ಬ್ಯಾಟ್ಸ್ ಮನ್ ಆಗುವ ಅವಕಾಶ ಸಿಕ್ಕಿದೆ.


ಕೊಹ್ಲಿ ಈಗ ಐಸಿಸಿ ರ್ಯಾಂಕಿಂಗ್ ನಲ್ಲಿ ಎರಡನೇ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇದ್ದಾರೆ. ಈಗ ಮತ್ತೆ ಕೊಹ್ಲಿಗೆ ತಾವು ಕಳೆದುಕೊಂಡ ನಂ.1 ಸ್ಥಾನ ಪಡೆಯಲು ಅವಕಾಶ ಎದುರಾಗಿದೆ.

ಸದ್ಯಕ್ಕೆ ಒಂದೇ ಒಂದು ಅಂಕದಿಂದ ಸ್ಮಿತ್ ಗಿಂತ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಉತ್ತಮ ಆಟ ಪ್ರದರ್ಶಿಸಿದರೆ ನಂ.1 ಆಗಲಿದ್ದಾರೆ. ಸದ್ಯದ ಫಾರ್ಮ್ ನಲ್ಲಿ ಕೊಹ್ಲಿಗೆ ಅದೂ ಸಾಧ‍್ಯವಿಲ್ಲದೇ ಅಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ