ವಿಚಿತ್ರ ಕಾರಣದಿಂದ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ನಿಂದ ಕೊಕ್ ಪಡೆದ ದ.ಆಫ್ರಿಕಾ ಕ್ರಿಕೆಟಿಗ!

ಶುಕ್ರವಾರ, 18 ಅಕ್ಟೋಬರ್ 2019 (09:24 IST)
ರಾಂಚಿ: ಕ್ರಿಕೆಟಿಗರು ಔಟಾದ ಬೇಸರದಲ್ಲಿ ಗಾಳಿಯಲ್ಲಿ ಗುದ್ದುವುದು, ಇಲ್ಲವೇ ಬ್ಯಾಟ್ ಕೊಡವುದು ಸಾಮಾನ್ಯ. ಆದರೆ ದ.ಆಫ್ರಿಕಾ ಕ್ರಿಕೆಟಿಗ ಆಡನ್ ಮರ್ಕರಮ್ ಹೀಗೇ ಮಾಡಲು ಹೋಗಿ ಈಗ ಅಂತಿಮ ಟೆಸ್ಟ್ ಆಡದ ಪರಿಸ್ಥಿತಿಗೆ ತಲುಪಿದ್ದಾರೆ.


ಕಳೆದ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಬೇಗನೇ ಔಟಾದ ಬೇಸರದಲ್ಲಿ ಆಡನ್ ವಸ್ತುವೊಂದಕ್ಕೆ ಗುದ್ದಿ ತಮ್ಮ ಹತಾಶೆ ತೀರಿಸಿಕೊಂಡಿದ್ದರಂತೆ. ಆದರೆ ಅವರು ಗುದ್ದಿದ ರಭಸಕ್ಕೆ ಕೈಗೆ ಗಾಯ ಮಾಡಿಕೊಂಡಿದ್ದಾರೆ.

ಇದೇ ತಪ್ಪಿಗೆ ಅವರೀಗ ರಾಂಚಿ ಟೆಸ್ಟ್ ನಿಂದ ಅನ್ ಫಿಟ್ ಎಂದು ಕೊಕ್ ಪಡೆದಿದ್ದಾರೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡನ್ ಗೆ ರನ್ ಗಳಿಸಲು ಸಾಧ‍್ಯವಾಗಿರಲಿಲ್ಲ. ದ.ಆಫ್ರಿಕಾವೂ ಎರಡೂ ಟೆಸ್ಟ್ ಗಳನ್ನು ಸೋತು ಈಗಾಗಲೇ ಸರಣಿ ಕಳೆದುಕೊಂಡಿದೆ. ಅಂತಿಮ ಟೆಸ್ಟ್ ನಲ್ಲಿ ಮಾನ ಉಳಿಸಿಕೊಳ್ಳುವ  ಅವಕಾಶ ಪಡೆದಿದೆ. ಆದರೆ ಅದರ ನಡುವೆ ಆಡನ್ ಹೀಗೊಂದು ಎಡವಟ್ಟು ಮಾಡಿಕೊಂಡು ತಂಡದಿಂದಲೇ ಹೊರ ನಡೆಯುವ ಪರಿಸ್ಥಿತಿ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ