ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿದ ಟೀಂ ಇಂಡಿಯಾ ಯುವ ಪವರ್
ಶುಕ್ರವಾರ, 15 ಜನವರಿ 2021 (09:18 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಅತಿಥೇಯರಿಗೆ ಟೀಂ ಇಂಡಿಯಾ ಯುವ ವೇಗಿಗಳು ಆರಂಭಿಕ ಆಘಾತ ನೀಡಿದ್ದಾರೆ.
ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಡೇವಿಡ್ ವಾರ್ನರ್ 1, ಮಾರ್ಕಸ್ ಹ್ಯಾರಿಸ್ 5 ಮತ್ತು ಸ್ಟೀವ್ ಸ್ಮಿತ್ 36 ರನ್ ಗಳಿಸಿ ಔಟಾಗಿದ್ದಾರೆ. ಭಾರತದ ಪರ ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಕಬಳಿಸಿದ್ದಾರೆ.