ಹಾರ್ದಿಕ್ ಪಾಂಡ್ಯರನ್ನು ಸೈಡ್ ಲೈನ್ ಮಾಡಲು ಪ್ಲ್ಯಾನ್ ಮಾಡಿರುವ ಗೌತಮ್ ಗಂಭೀರ್

Krishnaveni K

ಬುಧವಾರ, 17 ಜುಲೈ 2024 (10:48 IST)
ಮುಂಬೈ: ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾರಿಂದ ತೆರವಾದ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಹೊಸ ನಾಯಕನ ಹುಡುಕಾಟ ಆರಂಭವಾಗಿದೆ. ನಿನ್ನೆ ಬಿಸಿಸಿಐ ಮೂಲಗಳಿಂದ ಹಾರ್ದಿಕ್ ಪಾಂಡ್ಯರೇ ಮುಂದಿನ ನಾಯಕ ಎಂಬ ಮಾತು ಕೇಳಿಬಂದಿತ್ತು. ಆದರೆ ಅದೀಗ ಉಲ್ಟಾ ಆಗುವ ಸಾಧ್ಯತೆಯಿದೆ.

ಟಿ20 ಕ್ರಿಕೆಟ್ ನಲ್ಲಿ ಹಾರ್ದಿಕ್ ಬದಲು ಸೂರ್ಯಕುಮಾರ್ ಯಾದವ್ ಗೆ ಪಟ್ಟ ಕಟ್ಟಲು ಗೌತಮ್ ಗಂಭೀರ್ ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಮೂಲಕ ಕ್ಯಾಪ್ಟನ್ ಆಗಿಯೇಬಿಟ್ಟೆ ಎಂಬ ಖುಷಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಸಡನ್ ಆಗಿ ಶಾಕ್ ಗೊಳಗಾಗಿದ್ದಾರೆ.

2026 ರ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಹಾರ್ದಿಕ್ ಬದಲು ಸೂರ್ಯಕುಮಾರ್ ಗೆ ನಾಯಕತ್ವ ನೀಡುವ ಬಗ್ಗೆ ಈಗಾಗಲೇ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಈ ವಿಚಾರವನ್ನು ಹಾರ್ದಿಕ್ ಬಳಿಯೂ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಹಾರ್ದಿಕ್ ಈಗಾಗಲೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಮಾತ್ರ ಲಭ್ಯರಿರುವುದಾಗಿ ಹೇಳಿದ್ದಾರೆ. ಫಿಟ್ ಆಗಿದ್ದರೂ ವೈಯಕ್ತಿಕ ಕಾರಣ ನೀಡಿ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಗಂಭೀರ್ ಗೆ ಸೂರ್ಯಕುಮಾರ್ ಜೊತೆ ಐಪಿಎಲ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೇ ಕಾರಣಕ್ಕೆ ಸೂರ್ಯ ಮೇಲೆ ಗಂಭೀರ್ ಒಲವು ತೋರಿಸಿದ್ದಾರೆ. ಹಾರ್ದಿಕ್ ಪದೇ ಪದೇ ಗಾಯಗೊಳ್ಳುತ್ತಿರುವುದರಿಂದ ಸೂರ್ಯ ಸೂಕ್ತ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ