ಇಂದು ಬಿಸಿಸಿಐಗೆ ಸುಪ್ರೀಂ ಕೋರ್ಟ್ ಆರ್ಡರ್..! ಆರ್ಡರ್..! ಆರ್ಡರ್!!!

ಸೋಮವಾರ, 30 ಜನವರಿ 2017 (11:14 IST)
ನವದೆಹಲಿ:  ಹೆಚ್ಚು ಕಡಿಮೆ ಒಂದು ತಿಂಗಳು ಆಯ್ತು. ಇನ್ನೂ ಬಿಸಿಸಿಐಗೆ ಬರಬೇಕಾದವರು ಬರಲಿಲ್ಲ. ಈವತ್ತಾದ್ರೂ ಬರ್ತಾರಾ ಎನ್ನುವುದು ಕ್ರಿಕೆಟ್ ಲೋಕದ ಕುತೂಹಲ. ಎಲ್ಲದಕ್ಕೂ ಸುಪ್ರೀಂ ಕೋರ್ಟ್ ಮನಸ್ಸು ಮಾಡಬೇಕು.

 
ಜನವರಿ ಆರಂಭದಲ್ಲೇ ಲೋಧಾ ಸಮಿತಿ ಶಿಫಾರಸ್ಸು ಪಾಲಿಸದ ಬಿಸಿಸಿಐನ ಉನ್ನತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್ ಕಿತ್ತು ಹಾಕಿತ್ತು.  ಆ ಸ್ಥಾನಕ್ಕೆ ಹೊಸ ಆಡಳಿತಾಧಿಕಾರಿಗಳನ್ನು ನೇಮಿಸಲು ನ್ಯಾಯಾಲಯ ಇಬ್ಬರು ಸದಸ್ಯರ ಸಲಹಾ ಸಮಿತಿಯನ್ನು ನೇಮಿಸಿತ್ತು. ಆದರೆ ಯಾಕೋ ಆ ಸಲಹಾ ಸಮಿತಿ ನೀಡಿದ ಪಟ್ಟಿಯೂ ನ್ಯಾಯಾಲಯಕ್ಕೆ ಒಪ್ಪಿಗೆಯಾಗಿಲ್ಲ.

ಹಾಗಾಗಿ ಇದುವರೆಗೆ ಎರಡು ಬಾರಿ ವಿಚಾರಣೆ ನಡೆದರೂ ಬಿಸಿಸಿಐಗೆ ಅಧ್ಯಕ್ಷ ಹಾಗೂ ಇತರ ಉನ್ನತಾಧಿಕಾರಿಗಳ ನೇಮಕವಾಗಿಲ್ಲ. ಇತ್ತೀಚೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ ಆಡಳಿತಾಧಿಕಾರಿಗಳನ್ನು ನೇಮಿಸುವುದಕ್ಕೆ ತಡವಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದರು.

ಇಂದು ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇಂದಾದರೂ ನ್ಯಾಯಾಲಯ ಹೊಸ ಆಡಳಿತಾಧಿಕಾರಿಗಳನ್ನು ನೇಮಿಸುವ ಮನಸ್ಸು ಮಾಡುತ್ತಾ? ಬಿಸಿಸಿಐಗೆ ಹೊಸ ಅಧ್ಯಕ್ಷರು ಬರುತ್ತಾರಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ