ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ನಾಳೆ ಸ್ಪಷ್ಟ ಉತ್ತರ ಸಿಕ್ಕಲಿದೆ. ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ನಾಳೆ ಸಭೆ ಸೇರಲಿದ್ದು, ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ.
ಆರು ಜನ ಅಭ್ಯರ್ಥಿಗಳ ಸಂದರ್ಶನ ನಾಳೆ ನಡೆಯಲಿದ್ದು, ಇವರ ಪೈಕಿ ರವಿ ಶಾಸ್ತ್ರಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ರಿಚರ್ಡ್ಸ್ ಪಿಬಸ್, ಟಾಮ್ ಮೂಡಿ, ವೀರೇಂದ್ರ ಸೆಹ್ವಾಗ್, ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್ ಸ್ಪರ್ಧೆಯಲ್ಲಿರುವ ಇತರರು.
ಒಟ್ಟಾರೆ 10 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಆರು ಮಂದಿ ಹೆಸರನ್ನು ಅಂತಿಮ ಪಟ್ಟಿಯಲ್ಲಿಡಲಾಗಿದೆ. ಈ ಆರು ಮಂದಿಯನ್ನು ನಾಳೆ ಗಂಗೂಲಿ, ಸಚಿನ್ ಮತ್ತು ಲಕ್ಷ್ಮಣ್ ನೇತೃತ್ವದ ಸಮಿತಿ ಸಂದರ್ಶನ ನಡೆಸಲಿದೆ. ಕುಂಬ್ಳೆ-ಕೊಹ್ಲಿ ವಿವಾದದ ನಂತರ ಕ್ರಿಕೆಟ್ ಸಮಿತಿ ಕೋಚ್ ಆಯ್ಕೆ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದೆ. ಹೀಗಾಗಿ ಕೊಹ್ಲಿಯ ಮೆಚ್ಚಿನ ರವಿ ಶಾಸ್ತ್ರಿ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.