ರೋಹಿತ್-ರೆಹಾನೆ ನಡುವೆ ನ್ಯೂಜಿಲೆಂಡ್ ಟೆಸ್ಟ್ ಸರಣಿ ನಾಯಕತ್ವದ ಪೈಪೋಟಿ
ಹೀಗಾಗಿ ಕೊಹ್ಲಿ ಸ್ಥಾನದಲ್ಲಿ ತಂಡವನ್ನು ಮುನ್ನಡೆಸುವರು ಯಾರು ಎಂಬ ಪ್ರಶ್ನೆ ಬಂದಿದೆ. ಟಿ20 ನಾಯಕತ್ವ ರೋಹಿತ್ ಶರ್ಮಾ ಪಾಲಾಗಿದೆ. ಹೀಗಾಗಿ ಟೆಸ್ಟ್ ತಂಡವನ್ನೂ ಅವರೇ ಮುನ್ನಡೆಸುತ್ತಾರಾ ಅಥವಾ ಉಪನಾಯಕ ಅಜಿಂಕ್ಯಾ ರೆಹಾನೆ ಮತ್ತೆ ನಾಯಕತ್ವದ ಹೊಣೆ ಹೊರಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಸಾಮಾನ್ಯವಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೆಹಾನೆ ಟೆಸ್ಟ್ ನಲ್ಲಿ ತಂಡದ ನಾಯಕತ್ವ ವಹಿಸುತ್ತಾರೆ. ಆದರೆ ಇದೀಗ ಟಿ20 ನಾಯಕ ರೋಹಿತ್ ಶರ್ಮಾ ಇರುವಾಗ ಅವರೂ ಸ್ಪರ್ಧೆಯಲ್ಲಿದ್ದಾರೆ. ಆದರೆ ರೆಹಾನೆಗೆ ಹೋಲಿಸಿದರೆ ರೋಹಿತ್ ಗೆ ಟೆಸ್ಟ್ ತಂಡಗಳಲ್ಲಿ ತಂಡ ಮುನ್ನಡೆಸಿದ ಅನುಭವವಿಲ್ಲ. ಹೀಗಾಗಿ ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಬಹುದು ಎಂಬ ಪ್ರಶ್ನೆ ಮೂಡಿದೆ.