ಬೆನೊನಿ: ಕಳೆದ ವರ್ಷ ನವಂಬರ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಫೈನಲ್ ಅನುಭವಿಸಿದ ಸೋಲು ಎಲ್ಲಾ ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ‍್ಯವೇ ಇಲ್ಲ.
ಅಂದು ಹಿರಿಯರು ಅನುಭವಿಸಿದ ಸೋಲಿಗೆ ಇಂದು ಭಾರತದ ಕಿರಿಯರಿಗೆ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ.
ಸೆಮಿಫೈನಲ್ ನಲ್ಲಿ ಭಾರತ ಅತಿಥೇಯ ದ.ಆಫ್ರಿಕಾವನ್ನು ಸೋಲಿಸಿ ಫೈನಲ್ ಗೇರಿತ್ತು. ಎರಡನೇ ಸೆಮಿಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ ಗೇರಿದೆ. ಈ ಮೂಲಕ ಭಾರತ-ಆಸ್ಟ್ರೇಲಿಯಾ ಫೈನಲ್ ಗೆ ವೇದಿಕೆ ಸಿದ್ಧವಾಗಿದೆ.
ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದೀಗ ಕಿರಿಯರಿಗೆ ಉತ್ತಮ ವೇದಿಕೆ ಸಿಕ್ಕಂತಾಗಿದೆ. ಸಾಮಾನ್ಯವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯವೆಂದರೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ಉತ್ಸಾಹವಿರುತ್ತದೆ. ಆದರೆ ಈಗ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಎಂದರೂ ಅಷ್ಟೇ ಉತ್ಸಾಹವಿದೆ. ಉದಯ್ ಸುಹಾರಣ್ ನೇತೃತ್ವದ ಯುವ ಪಡೆ ಈ ಟೂರ್ನಿಯುದ್ದಕ್ಕೂ ಚೇತೋಹಾರಿ ಪ್ರದರ್ಶನ ನೀಡುತ್ತಾ ಬಂದಿದೆ. ಆರನೇ ಬಾರಿಗೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಹೀಗಾಗಿ ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಆಸೀಸ್ ಸೋಲಿಸಿದರೆ ಭಾರತೀಯರಿಗೂ ನೆಮ್ಮದಿಯಾಗಲಿದೆ.