ಶ್ರೀಶಾಂತ್, ಹರ್ಭಜನ್ ಸಿಂಗ್ ರ ಆ ವಿಡಿಯೋ 17 ವರ್ಷಗಳ ಬಳಿಕ ಬಿಡುಗಡೆಯಾಯ್ತು
ಸದ್ಯಕ್ಕೆ ಲಂಡನ್ ನಿವಾಸಿಯಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ಅಂದು ಏನಾಯ್ತು ಎಂದು ಹೇಳಿದ್ದಾರೆ. ಜೊತೆಗೆ ವಿಡಿಯೋವೊಂದನ್ನೂ ಬಿಡುಗಡೆ ಮಾಡಿದ್ದಾರೆ.
ಇದರಲ್ಲಿ ನಿಜವಾಗಿಯೂ ಅಂದು ಏನಾಯ್ತು ಎಂಬುದರ ಸ್ಪಷ್ಟ ದೃಶ್ಯವಿದೆ. ಅವತ್ತು ಶ್ರೀಶಾಂತ್ ಗೆ ಭಜಿ ಹೊಡೆದಿದ್ದು ನಿಜ ಎಂದು ಲಲಿತ್ ಮೋದಿ ಹೇಳಿದ್ದಾರೆ. ಆಗ ಭಜಿ ಮುಂಬೈ ಪರ, ಶ್ರೀಶಾಂತ್ ಪಂಜಾಬ್ ಪರ ಆಡುತ್ತಿದ್ದರು. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಶೇಕ್ ಹ್ಯಾಂಡ್ ಮಾಡುತ್ತಿದ್ದರು.
ಶ್ರೀಶಾಂತ್ ರನ್ನು ಭಜಿ ಹತ್ತಿರಕ್ಕೆ ಕರೆಯುತ್ತಾರೆ. ಬಳಿಕ ಕೈ ತಿರುಗಿಸಿ ಒಂದು ಏಟು ಹೊಡೆದೇ ಬಿಡುತ್ತಾರೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಈ ಘಟನೆಯ ನಿಜವಾದ ವಿಡಿಯೋ ಈಗಲೂ ನನ್ನ ಬಳಿಯಿದೆ. ಅದನ್ನು ನಾನು ನಿಮಗೆ ತೋರಿಸುತ್ತೇನೆ ಎಂದು ಸಂದರ್ಶನದಲ್ಲಿ ಲಲಿತ್ ಮೋದಿ ಹೇಳಿದ್ದಾರೆ. ಆ ವಿಡಿಯೋ ಈಗ ರಿಲೀಸ್ ಆಗಿದ್ದು ಇಲ್ಲಿದೆ ನೋಡಿ.