ಹೆಡ್ಡಿಂಗ್ಲೇಗೆ ಆಗಮಿಸಿದ ವಿರಾಟ್ ಕೊಹ್ಲಿ ಪಡೆ

ಸೋಮವಾರ, 23 ಆಗಸ್ಟ್ 2021 (09:10 IST)
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ರೋಚಕವಾಗಿ ಗೆದ್ದು ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ ಪಡೆ ಈಗ ತೃತೀಯ ಟೆಸ್ಟ್ ಪಂದ್ಯವಾಡಲು ಹೆಡ್ಡಿಂಗ್ಲೇ ಮೈದಾನಕ್ಕೆ ಆಗಮಿಸಿದೆ.


ಆಗಸ್ಟ್ 24 ರಿಂದ ಮೂರನೇ ಟೆಸ್ಟ್ ಆರಂಭವಾಗಲಿದ್ದು, ಕೊಹ್ಲಿ ಪಡೆ ನಿನ್ನೆಯೇ ಇಲ್ಲಿಗೆ ಆಗಮಿಸಿ ಅಭ್ಯಾಸ ಆರಂಭಿಸಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಪಂದ್ಯ ಡ್ರಾಗೊಂಡಿತ್ತು.

ಎರಡನೇ ಪಂದ್ಯದಲ್ಲಿ ಸೋಲುವ ಭೀತಿಯಲ್ಲಿದ್ದ ಟೀಂ ಇಂಡಿಯಾ ಅಂತಿಮ ದಿನದಲ್ಲಿ ಸರ್ವಾಂಗೀಣ ಪ್ರದರ್ಶನವಿತ್ತು ಗೆಲುವು ಸಾಧಿಸಿತ್ತು. ಅತ್ತ ಇಂಗ್ಲೆಂಡ್ ಕೂಡಾ ನಿನ್ನೆ ಇಲ್ಲಿಗೆ ಬಂದಿಳಿದಿದೆ ಎಂಬ ವರದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ