ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೃತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲುವುದರೊಂದಿಗೆ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡಿದ್ದಾರೆ.
ವಿದೇಶದಲ್ಲಿ ನಾಯಕತ್ವ ವಹಿಸಿದ 24 ಟೆಸ್ಟ್ ಪಂದ್ಯಗಳಲ್ಲಿ ಜಯಗೊಳಿಸುವುದರೊಂದಿಗೆ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. ಇನ್ನು ವೈಯಕ್ತಿಕವಾಗಿ ಕೊಹ್ಲಿ ಸತತ ಮೂರನೇ ವರ್ಷ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ (2653 ರನ್ ) ಗಳಿಸಿದ ದಾಖಲೆ ಮಾಡಿದರು.
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಟೀಂ ಇಂಡಿಯಾಕ್ಕೆ 150 ನೇ ಗೆಲುವಾಗಿತ್ತು. ಈ ಮೂಲಕ 150 ಟೆಸ್ಟ್ ಪಂದ್ಯ ಗೆದ್ದ ವಿಶ್ವದ ಐದನೆಯ ರಾಷ್ಟ್ರ ಎನಿಸಿಕೊಂಡಿತು. ಅಷ್ಟೇ ಅಲ್ಲ, ಭಾರತ ಮೊದಲ ಬಾರಿಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಷ್ಯಾದ ಹೊರಗಡೆ ನಾಲ್ಕು ಟೆಸ್ಟ್ ಗೆದ್ದು ಸರ್ವಾಧಿಕ ಜಯ ಗಳಿಸಿದ ದಾಖಲೆ ಮಾಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ