ಉತ್ತರಾಖಂಡಕ್ಕೆ ಸಂಸಾರ ಸಮೇತ ಪ್ರವಾಸ ಹೊರಟ ವಿರಾಟ್ ಕೊಹ್ಲಿ

ಗುರುವಾರ, 17 ನವೆಂಬರ್ 2022 (09:53 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾದಿಂದ ಬ್ರೇಕ್ ಪಡೆದಿರುವ ವಿರಾಟ್ ಕೊಹ್ಲಿ ಈಗ ಸಂಸಾರ ಸಮೇತ ವರ್ಷಂಪ್ರತಿಯಂತೆ ಉತ್ತರಾಖಂಡಕ್ಕೆ ಪ್ರವಾಸ ಹೊರಟಿದ್ದಾರೆ.

ಪತ್ನಿ ಅನುಷ್ಕಾ ಶರ್ಮಾ ಮಗಳು ವಮಿಕಾ ಜೊತೆಗೆ ಡಿಸೆಂಬರ್ ವೇಳೆ ಪ್ರತೀ ವರ್ಷವೂ ಕೊಹ್ಲಿ ಉತ್ತರಾಖಂಡದತ್ತ ಪ್ರಯಾಣ ಬೆಳೆಸುತ್ತಾರೆ. ಇಲ್ಲಿನ ಪರಿಸರದ ನಡುವೆ ಶಾಂತಿಯುತವಾಗಿ ಕಾಲ ಕಳೆಯಲು ಬಯಸುತ್ತಾರೆ. ಈ ಬಾರಿ ಕೊಂಚ ಬೇಗನೇ ಪ್ರವಾಸ ಆರಂಭಿಸಿದ್ದಾರೆ.

ಟಿ20 ವಿಶ್ವಕಪ್ ಬಳಿಕ ಈಗ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿದೆ. ಆದರೆ ಈ ಸರಣಿಯಿಂದ ಕೊಹ್ಲಿ ಹೊರಗುಳಿದಿದ್ದಾರೆ. ಡಿಸೆಂಬರ್, ಜನವರಿಯಲ್ಲಿ ಕೊಹ್ಲಿ ಮದುವೆ ವಾರ್ಷಿಕೋತ್ಸವ, ಮಗಳು ವಮಿಕಾ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಕೊಹ್ಲಿ ಉತ್ತರಭಾರತ ಪ್ರವಾಸ ಮಾಡುವುದು ಸಾಮಾನ್ಯವಾಗಿದೆ. ಅದರಂತೆ ಈ ಬಾರಿಯೂ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ